ಮೋದಿ ಪ್ರಧಾನಿಯಾಗುವುದು ಸೂಕ್ತ: ಸುರೇಶ್ಗೌಡ
ತುಮಕೂರು: ಈಗ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನರೇಂದ್ರ ಮೋದಿಯವರನ್ನು ಬಿಜೆಪಿಯ ಪ್ರಧಾನಿಯನ್ನಾಗಿಸಲು ತುಮಕೂರು ಗ್ರಾಮಾಂತರ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ಗೌಡ ಕರೆ ನೀಡಿದರು.
ನರೇಂದ್ರ ಮೋದಿಯವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ಕೇರಳವನ್ನು ಒಳಗೊಂಡಂತೆ ದೇಶಾದ್ಯಂತ, ಬಿಜೆಪಿಯ ಪರವಾಗಿ ಜನಸಾಮಾನ್ಯರಲ್ಲಿ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ ಎಂದರು.
ಮುಂಬರುವ ಚುನಾವಣೆಯು ಜಾತಿ, ಹಣವನ್ನು ಮೀರಿಸಿ ಭಾರತೀಯ ಜನತಾ ಪಕ್ಷದ ಚುನಾವಣೆಯಾಗಲಿದೆ ಎಂದ ಅವರು ವ್ಯಕ್ತಿಗಿಂತ ಪಕ್ಷ, ಪಕ್ಷಕಿಂತ ದೇಶ ಮುಖ್ಯವೆಂದು ತಿಳಿಸಿದರು.
ಕಾರ್ಯಕರ್ತರ ಶ್ರಮ ಹಾಗೂ ಶಕ್ತಿ ಮುಂದಿನ ಚುನಾವಣೆಯಲ್ಲಿ ಸಹಕಾರಿಯಾಗಲಿದೆ ಎಂದು ನುಡಿದರು. ಮುಂಬರುವ ದಿನಗಳಲ್ಲಿ ಸರಿಯಾದ ಯೋಜನೆಯೊಂದಿಗೆ ಚಟುವಟಿಕೆ ರೂಪಿಸಲಾಗುವುದು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಬೂತ್ ಕಾರ್ಯಕರ್ತರ ಸಮಾವೇಶ, ಸಕ್ರಿಯ ಕಾರ್ಯಕರ್ತರ ಸದಸ್ಯತಾ ಅಭಿಯಾನ, ಅಟಲ್ ಬಿಹಾರಿ ವಾಜಪೇಯ್ ರವರ ಹುಟ್ಟುಹಬ್ಬದ ಆಚರಣೆ, ಹೋಬಳಿ ಮಟ್ಟದ ಸಮಾವೇಶದ ಯೋಜನೆಗಳನ್ನು ವಿಸ್ತೃವಾಗಿ ಹಮ್ಮಿಕೊಳ್ಳಲಾಗುವುದು ಎಂದರು.
ದೇಶದ ಮೋದಿ ಅವರು ಪ್ರಧಾನಿಯಾಗುವುದನ್ನು ಎದುರು ನೋಡುತ್ತಿದೆ. ದೇಶಾದ್ಯಂತ ಬಿಜೆಪಿ ಹಾಗೂ ಮೋದಿ ಪರ ಅಲೆ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ತೀವ್ರಗೊಳ್ಳಲಿದ್ದು ಮೋದಿ ಪ್ರಧಾನಿಯಾವುದು ಖಚಿತ. ಈಗಾಗಲೇ ದೇಶದ ಜನ ಬದಲಾವಣೆ ಬಯಸಿದ್ದು ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಸುರೇಶ್ಗೌಡ ತಿಳಿಸಿದರು.