ಹುಳಿಯಾರು: ಶನೇಶ್ವರಸ್ವಾಮಿಗೆ ಬೆಣ್ಣೆ ಅಲಂಕಾರ
ಹುಳಿಯಾರು: ಪಟ್ಟಣದ ಗಾಂಧಿಪೇಟೆಯ ಪ್ರಸಿದ್ಧ ಶ್ರೀಶನೇಶ್ವರ ಸ್ವಾಮಿ ದೇವಾಲಯದಲ್ಲಿ ಶನಿವಾರದಂದು ಕಡೆ ಕಾರ್ತೀಕದ ಅಂಗವಾಗಿ ಸ್ವಾಮಿಗೆ ವಿಶೇಷ ಬೆಣ್ಣ ಅಲಂಕಾರ ಮಾಡಿ, ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು. ಅರ್ಚಕರಾದ ಗುಂಡಣ್ಣ ಹಾಗೂ ಗಣೇಶ್ ಅವರ ಪೌರೋಹಿತ್ಯದಲ್ಲಿ ಸ್ವಾಮಿಗೆ ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ, ಅಷ್ಟೋತ್ತರ ಸೇರಿದಂತೆ ಮಹಾಮಂಗಳಾರತಿ ನಡೆಸಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಕಾರ್ಯ ನಡೆಸಲಾಯಿತು. ಸಂಜೆ ಬೆಣ್ಣೆಯಿಂದ ಅಲಂಕರಿಸಿದ್ದಲ್ಲದೆ, ದೇವಾಲಯದ ಸುತ್ತ ದೀಪಗಳನ್ನು ಹಚ್ಚಿ, ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.