ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಂಗವಿಕಲರಿಗೂ ಸಮಾನ ಅವಕಾಶ ನೀಡಿ: ರಾಜ್‌ಕುಮಾರ್

Mainashree
Updated On : 8 Dec 2013, 10:01 am

ಶಿರಾ: ಸಮಾಜದಲ್ಲಿರುವ ಎಲ್ಲಾ ಅಂಗವಿಕಲರಿಗೂ ಸಮಾನ ಅವಕಾಶ ನೀಡಿ ಅವರನ್ನು ಮುಖ್ಯವಾಹಿನಿಗೆ ತರಲು ಎಲ್ಲರೂ ಪ್ರಯತ್ನಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ರಾಜ್‌ಕುಮಾರ್ ಅವರು ತಿಳಿಸಿದರು.
ಅವರು ನಗರದ ಜಿ.ಕೆ.ಎಂ.ಹೆಚ್.ಪಿ.ಬಿ.ಎಸ್. ಶಾಲೆಯಲ್ಲಿ ನಡೆದ 21ನೇ ವಿಶ್ವ ಅಂಗವಿಕಲರ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ, ಶಿಕ್ಷಣ ಇಲಾಖೆ ಅಂಗವಿಕಲ ಮಕ್ಕಳಿಗೆ ಪ್ರತಿ ವರ್ಷ ವೈದ್ಯಕೀಯ
ತಪಾಸಣಾ ಶಿಬಿರವನ್ನು ಏರ್ಪಡಿಸಿ ಈ ಮಕ್ಕಳಿಗೆ ಅವಶ್ಯಕವಾದ ಸಾಧನ-ಸಲಕರಣೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿ, ಇದೇ ಸಂದರ್ಭದಲ್ಲಿ ಅಂಗವಿಕಲ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಿಸಿದರು.
ತಾಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಚಿತ್ತಯ್ಯ ಮಾತನಾಡಿ ಪ್ರತಿ ವರ್ಷ ಆಚರಿಸುವ ವಿಶ್ವ ಅಂಗವಿಕಲರ ದಿನಾಚರಣೆಯು ಅಂಗವಿಕಲ ಬಂಧುಗಳಿಗೆ ವರದಾನವಿದ್ದಂತೆ ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಇಲಾಖೆ ಅಂಗವಿಕಲರ ಸಂಘದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಸಮಾರಂಭದಲ್ಲಿ ಅಂಗವಿಕಲ ಮಕ್ಕಳಿಗಾಗಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಬಿ.ಆರ್.ಸಿ. ಜೆ.ಸಿದ್ದರಾಜು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್. ಹಿಮಂತರಾಜ್, ಡಿ.ಐ.ಇ.ಆರ್.ಟಿ. ರಾಜಣ್ಣ ಮಾತನಾಡಿದರು.
ಐ.ಇ.ಆರ್.ಟಿ. ಎಂ.ಎನ್. ಧನಂಜಯ ಸ್ವಾಗತಿಸಿ, ಈರಣ್ಣ ವಂದಿಸಿದರು. ದೈಹಿಕ ಶಿಕ್ಷಕರು, ವಿಶೇಷ ನೂರಾರು ಅಂಗವಿಕಲ ಮಕ್ಕಳು ಮತ್ತು ಪೋಷಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement