ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎಲ್ಲೆಡೆ ನಮೋ ಅಲೆ ಸ್ಪಷ್ಟ

Mainashree
Updated On : 8 Dec 2013, 11:00 am

ಕುಣಿಗಲ್: ಉತ್ತರ ಭಾರತದ ನಾಲ್ಕುರಾಜ್ಯಗಳ ವಿಧಾನಸಭಾ ಚುನಾವಣೆಯ ಮಿನಿ ಸಮರದ ಫಲಿತಾಂಶ ಗಮಿನಿಸಿದಲ್ಲಿ ರಾಷ್ಟ್ರದ ಜನತೆ ಕಾಂಗ್ರೆಸ್ ಪಕ್ಷ ತಿರಸ್ಕರಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮೋ ಅಲೆ ಪರವಾಗಿ ಜನತೆ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ, ರಾಜ್ಯದಲ್ಲೂ ಕಾಂಗ್ರೆಸ್‌ಗೆ ಇದೇ ಗತಿ ಅಗುವುದರಲ್ಲಿ ಅನುಮಾನವಿಲ್ಲವೆಂದು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ತಿಳಿಸಿದರು.
ರೈತ ವಿರೋಧಿ ನೀತಿ: ಮುಂಬರುವ ಲೋಕಸಭೆ ಚುನಾವಣೆಗಳಲ್ಲಿ ಜನ ಬಿಜೆಪಿ ಬೆಂಬಲಿಸಿ ನರೇಂದ್ರಮೋದಿಯವರನ್ನು ಪ್ರಧಾನ ಮಂತ್ರಿಯಾಗಿಸುವುದರಲ್ಲಿ ಅನುಮಾನವಿಲ್ಲ. ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸಿ, ಕೇವಲ ಮತಬೇಟೆಗಾಗಿ ಒಂದು ವರ್ಗದ ಜನತೆಗೆ ಹಲವು ಯೋಜನೆ ನೀಡಲು ಹೊರಟಿದ್ದು ಜನತೆ ಬೇಸರಗೊಂಡಿದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ ಆಡಳಿತರೂಢ  ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಲಿದ್ದಾರೆಂದರು.
ವಿಜಯೋತ್ಸವದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಚಿಕ್ಕರಾಮಯ್ಯ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಂ. ತಿಮ್ಮಪ್ಪ, ತಾಪಂ ಸದಸ್ಯೆ ಸಿದ್ದಲಿಂಗಯ್ಯ, ಮುಖಂಡರಾದ  ಸಂತೋಷ್, ರಂಗನಾಥ್, ಲ್ಯಾಬ್ ಶ್ರೀನಿವಾಸ, ರೇಣುಕಪ್ಪ, ನಾಗರಾಜ್, ಗೋಪಿ, ಮಹೇಶ ಸತೀಶ, ನರಸಿಂಹ, ಅನಂತರಾಮು, ಕೃಷ್ಣಪ್ಪ, ವೆಂಕಟೇಶ್ ಇತರರು ಉಪಸ್ಥಿತರಿದ್ದರು.
ಹೆಬ್ಬೂರಿನಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಅಚರಿಸಿದ್ದು, ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ತಾಪಂ ಸದಸ್ಯೆ ಚಿಕ್ಕಮ್ಮ, ಮುಖಂಡರಾದ ಶಿವಕುಮಾರ, ರಾಘವೇಂದ್ರ, ರಮೇಶ್, ಸಿದ್ದಲಿಂಗಯ್ಯ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement