ಬರಗೂರು ಕ್ಲಸ್ಟರ್ನ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಶಿರಾ: ತಾಲೂಕಿನ ಬರಗೂರು ಗ್ರಾಮದ ಶ್ರೀ ದೇವಿ ರಾಯಲ್ ಶಾಲೆಯಲ್ಲಿ ಬರಗೂರು ಕ್ಲಸ್ಟರ್ನ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜ್ಞಾನಜ್ಯೋತಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಡಿ.ಎನ್.ಪರಮೇಶ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಹುಲಿಕುಂಟೆ ಹೋಬಳಿ ಶಿಕ್ಷಣ ಸಂಯೋಜಕ ಡಿ.ಕೆ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೆಶಕರಾದ ಪುಟ್ಟತಾಯಿ, ಕೃಷ್ಣಪ್ಪ, ಸಿ.ಆರ್.ಪಿ. ಪಿ.ಎಲ್. ಶ್ರೀನಿವಾಸ್, ಮುಖ್ಯ ಶಿಕ್ಷಕ ಕೆ.ನರಸಿಂಹಯ್ಯ, ಮತ್ತಿತರರು ಹಾಜರಿದ್ದರು.
ಸಹ ಶಿಕ್ಷಕ ಸಿ.ಎಸ್.ಜಯಣ್ಣ ಪ್ರಾರ್ಥಿಸಿ, ಡಿ.ಆರ್.ಖಲೀಂ ಉಲ್ಲ ಸ್ವಾಗತಿಸಿ, ಬೀರನಹಳ್ಳಿ ಶಾಲೆಯ ಸಹ ಶಿಕ್ಷಕ ಕೃಷ್ಣಮೂರ್ತಿ ವಂದಿಸಿದರು. ವಿಜೇತ ಮಕ್ಕಳಿಗೆ ಸ್ಥಳದಲ್ಲಿ ಬಹುಮಾನ, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕರೆಕ್ಯಾತನಹಳ್ಳಿ ಕ್ಲಸ್ಟರ್: ತಾಲೂಕಿನ ಕರೆಕ್ಯಾತನಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ ಕಾರ್ಯಕ್ರಮವನ್ನು ಅಗ್ರಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ತಾಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ ಸಿದ್ದೇಶ್ವರ ಹಾಗೂ ಶಾಲೆಗೆ ಕಂಪ್ಯೂಟರ್, ಪ್ರಿಂಟರ್ ದಾನವಾಗಿ ನೀಡಿದ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಕ್ಲಸ್ಟರ್ ವಿವಿಧ ಶಾಲೆಗಳ ಮಕ್ಕಳಿಗೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.