ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಕ್ರಮ ಅಂಗಡಿಗಳ ತೆರವು ವಿಳಂಬ: ಪ್ರತಿಭಟನೆ

Vishwanath S
Updated On : 10 Dec 2013, 12:38 pm

ಕ.ಪ್ರ.ವಾರ್ತೆ ಪಾವಗಡ ಡಿ,9
ಅಕ್ರಮ ಪೆಟ್ಟಿಗೆ ಅಂಗಡಿಗಳ ತೆರವುಗೊಳಿಸುವಲ್ಲಿ ಪಿಡಿಒ ಒಬ್ಬರ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ವಿರೋಧಿಸಿದ ದಲಿತ ಸಂಘಟನೆ ಅನೇಕ ಮಂದಿ ಪದಾಧಿಕಾರಿಗಳು ಸೋಮವಾರ ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಗ್ರಾಪಂಗೆ ಸೇರಿದ ನಿವೇಶನವೊಂದು ಕಳೆದ 10ವರ್ಷಗಳ ಹಿಂದೆ ದಲಿತ ಸಮುದಾಯ ಭವನ ನಿರ್ಮಾಣಕ್ಕೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಹೆಸರಿಗೆ ಮಂಜೂರಾಗಿ ಗ್ರಾಪಂನಿಂದ ಅನುಮೋದನೆಗೊಂಡಿತ್ತು.
ವಿವಾಹ ಸೇರಿದಂತೆ ದಲಿತರ ಇತರೆ ಶುಭ ಸಮಾರಂಭಗಳಿಗೆ ಕೂಡಲೇ ಸಮುದಾಯ ಭವನ ನಿರ್ಮಿಸಲು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಅನುಧಾನ ಮಂಜೂರಾಗಿದ್ದು ನಿವೇಶನದ ಸುತ್ತು ಹಾಗೂ ನಿವೇಶನದಲ್ಲಿ ಇತರೆ ವರ್ಗದವರು ಅಕ್ರಮವಾಗಿ ಪೆಟ್ಟಿಗೆ ಅಂಗಡಿಗಳು ಹಾಕಿಕೊಂಡ ವ್ಯಾಪಾರ ನಡೆಸುತ್ತಿರುವ ಕಾರಣ ಸಮುದಾಯ ಭವನ ನಿರ್ಮಾಣಕ್ಕೆ ತೀವ್ರ ತೊಂದರೆ ಆಗುತ್ತಿದ್ದ ಹಿನ್ನಲೆಯಲ್ಲಿ ಅಕ್ರಮ ಪೆಟ್ಟಿಗೆ ಅಂಗಡಿಗಳ ತೆರವಿಗೆ ತಾ.ವೈ.ಎನ್ ಹೊಸಕೋಟೆ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ  ದೂರು ನೀಡಲಾಗಿತ್ತು.
ದೂರು ನೀಡಿ 20ದಿನ ಕಳೆದರೂ ಪೆಟ್ಟಿಗೆ ಅಂಗಡಿಗಳು ತೆರವುಗೊಳಿಸುವಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ಹಾಗೂ ಗ್ರಾಮ ಪಂಚಾಯಿತಿಗೆ ಆಗಮಿಸದೇ ನಾಪತ್ತೆಯಾಗಿದ್ದ ಮೇರೆಗೆ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಎಚ್. ನಾರಾಯಣಪ್ಪ ಮಾತನಾಡಿ ದಲಿತರ ಶುಭ ಸಮಾರಂಭಗಳಿಗೆ ಸ್ಥಳ ಅಗತ್ಯವಿದ್ದು ಸಂಬಂಧಪಟ್ಟ ದಾಖಲೆಗಳೊಂದಿಗೆ ಗ್ರಾಪಂ ಪಿಡಿಒ ಸಿದ್ದಿಕ್ ಎಂಬುವರಿಗೆ ದೂರು ನೀಡಿ  ದಿನ ಕಳೆದರೂ  ಕ್ರಮ ಜರಿಗಿಸಿಲ್ಲವೆಂದು ಆರೋಪಿಸಿದರು.
ಈ ಸಂಬಂಧ ತಾಪಂ ಇಒ ತಿಪ್ಪೇಸ್ವಾಮಿ ಮಾತನಾಡಿ ದಾಖಲೆಯಂತೆ ನಿವೇಶನದಲ್ಲಿರುವ ಪೆಟ್ಟಿಗೆ ಅಂಗಡಿಗಳು ತೆರವು ಗೊಳಿಸಬೇಕು. ತೆರವಿಗೆ ಈಗಾಗಲೇ ಪಿಡಿಒಗೆ ಆದೇಶಿಸಲಾಗಿದ್ದು ರಜೆ ಕೂಡ ಹಾಕದೇ ಪಿಡಿಒ ಸಿದ್ದಿಕ್ ನಾಪತ್ತೆಯಾಗಿದ್ದು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಎಂ.ಲೋಕೋಶ್, ಧನುಂಜಯ ಎಸ್.ನಾಗರಾಜ್, ಕೃಷ್ಣಪ್ಪ ಸೇರಿದಂತೆ ಅನೇಕ ಮಂದಿ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement