ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಸಮರ್ಪಕ ಪಡಿತರ; ಕಠಿಣ ಕ್ರಮ

Vishwanath S
Updated On : 10 Dec 2013, 12:38 pm

ಕನ್ನಡಪ್ರಭ ವಾರ್ತೆ, ತುಮಕೂರು, ಡಿ.9
ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಚೀಟಿದಾರರಿಗೆ ಪಡಿತರ ವಸ್ತುಗಳನ್ನು ಸಮರ್ಪಕವಾಗಿ ವಿತರಣೆ ಮಾಡದಿದ್ದರೆ ಹಾಗೂ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸಂಬಂಧಪಟ್ಟ ಆಹಾರ ಶಿರಸ್ತೆದಾರರು ಹಾಗೂ ಆಹಾರ ನಿರೀಕ್ಷಕರುಗಳನ್ನೇ ನೇರ ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಯವರು ಅಂತ್ಯೋದಯ ಅನ್ನ ಯೋಜನೆ ಹಾಗೂ ಅಕ್ಷಯ ವರ್ಗದ ಪಡಿತರ ಚೀಟಿದಾರರಿಗೆ ವಿದ್ಯುನ್ಮಾನ ತೂಕ ಯಂತ್ರದ ಮುಖೇನ ಕಡ್ಡಾಯವಾಗಿ ಪಡಿತರ ಅಕ್ಕಿ, ಗೋಧಿ  ಮತ್ತು ಸಕ್ಕರೆಯನ್ನು ವಿತರಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪಡಿತರ ಚೀಟಿದಾರರು ಪಡಿತರ ಪಡೆಯುವಲ್ಲಿ ತೊಂದರೆಯುಂಟಾದಲ್ಲಿ ತಕ್ಷಣ ಜಿಲ್ಲಾಧಿಕಾರಿ ಕಚೇರಿ ಅಥವಾ ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ,  ತುಮಕೂರು ಅಥವಾ ಸಂಬಂಧಪಟ್ಟ ತಾಲೂಕುಗಳಲ್ಲಿ ತಾಲೂಕಿನ ತಹಸೀಲ್ದಾರ್ ಅವರಿಗೆ ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಎಸ್‌ಎಂಎಸ್ ಮೂಲಕ ಕಳುಹಿಸಿ:  ನಗರ, ಪಟ್ಟಣ ಪ್ರದೇಶದವರು ತಮ್ಮ ಸಂಪರ್ಕದ ಮೊಬೈಲ್ ಮೂಲಕ ಆರ್‌ಸಿಆರ್‌ಇಎನ್ ಎಂದು ಟೈಪ್ ಮಾಡಿ ಮುಂದೆ ಅವರ ಕಾಯಂ ಪಡಿತರ ಚೀಟಿ ಸಂಖ್ಯೆಯನ್ನು ಟೈಪ್ ಮಾಡಿ 9212357123 ಗೆ ಎಸ್.ಎಂ.ಎಸ್. ಮೂಲಕ ಕಳುಹಿಸಬೇಕು.
ಪಡಿತರ ಚೀಟಿದಾರರು ತಮ್ಮ ಮೊಬೈಲ್‌ನಿಂದ ನೋಂದಾವಣೆ ಮಾಡಿ ಎಸ್.ಎಂ.ಎಸ್. ಮೂಲಕ ಟೋಕನ್ ನಂಬರ್ ಹಾಗೂ ಸೆಕ್ಯೂರಿಟಿ ಕೋಡ್ ನಂಬರ್ ಪಡೆದುಕೊಳ್ಳುವುದು. ನಗರಪ್ರದೇಶದ ಟೋಕನ್ ನಂಬರ್ ಹಾಗೂ ಸೆಕ್ಯೂರಿಟಿ ಕೋಡ್‌ಗಳನ್ನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿ ಪರವಾನಗಿದಾರರಿಗೆ ತೋರಿಸಬೇಕು ಎಂದು ಅವರು ತಿಳಿಸಿದ್ದಾರೆ.
ಅಂತೆಯೇ ಗ್ರಾಮಾಂತರ ಪ್ರದೇಶದವರು ಪಡಿತರ ಚೀಟಿಯೊಂದಿಗೆ ನೇರವಾಗಿ ಗ್ರಾಮಪಂಚಾಯತಿ ಕಚೇರಿಗೆ ಹೋಗಿ ಪೋಟೋ ಹಾಗೂ ಬೆರಳಚ್ಚು ಬಯೋವುಟ್ರಿಕ್ ನೀಡುವುದು.  ಪೋಟೋ ಹಾಗೂ ಬಯೋವುಟ್ರಿಕ್ ನೀಡಿದ ಕಾಯಂ ಪಡಿತರ ಚೀಟಿದಾರರಿಗೆ ಮಾತ್ರ ಡಿಸೆಂಬರ್ 2013 ರ ತಿಂಗಳ ಪಡಿತರ ವಸ್ತುಗಳನ್ನು ನ್ಯಾಯಬೆಲೆ ಅಂಗಡಿಯವರು ವಿತರಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಗೆ ಪಡಿತರ ಹಂಚಿಕೆ: ತುಮಕೂರು ಜಿಲ್ಲೆಯ ಅಂತ್ಯೋದಯ ಅನ್ನ ಯೋಜನೆ, ಬಿ.ಪಿ.ಎಲ್. ವರ್ಗದ ಪಡಿತರ ಚೀಟಿದಾರರಿಗೆ ಈ ಕೆಳಕಂಡಂತೆ ಪಡಿತರ ಪದಾರ್ಥಗಳನ್ನು ಬಿಡುಗಡೆ ಮಾಡಲಾಗಿದೆ.  ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗಳಿಗೆ 29 ಕೆ.ಜಿ. ಅಕ್ಕಿ, 6 ಕೆ.ಜಿ. ಗೋಧಿ, ಅಕ್ಷಯ ವರ್ಗದ ಪಡಿತರ ಚೀಟಿಗಳಿಗೆ ಈ ಕೆಳಕಾಣಿಸಿದಂತೆ ಆಹಾರ ಧಾನ್ಯ ವಿತರಣೆಯಾಗಲಿದೆ.
ಏಕಸದಸ್ಯ ಚೀಟಿದಾರರಿಗೆ 9 ಕೆ.ಜಿ.ಅಕ್ಕಿ, 1 ಕೆ.ಜಿ. ಗೋಧಿ, ದ್ವಿಸದಸ್ಯ ಚೀಟಿದಾರರಿಗೆ 18 ಕೆ.ಜಿ.ಅಕ್ಕಿ, 2 ಕೆ.ಜಿ. ಗೋಧಿ, ಮೂರು ಮತ್ತು ಅದಕ್ಕಿಂತ ಮೇಲ್ಪಟ್ಟ ಸದಸ್ಯರಿದ್ದಲ್ಲಿ ಅಕ್ಕಿ 27 ಕೆ.ಜಿ. ಮತ್ತು ಗೋಧಿ 3 ಕೆ.ಜಿ. ನೀಡಲಾಗುವುದು.
ಎ.ಪಿ.ಎಲ್. ಪಡಿತರ ಚೀಟಿದಾರರಿಗೆ ಡಿಸೆಂಬರ್ ತಿಂಗಳಿಗೆ ಅಕ್ಕಿ ಮತ್ತು ಗೋಧಿ ಹಂಚಿಕೆಯನ್ನು ನೀಡಲಾಗಿಲ್ಲ.
ಸೀಮೆಎಣ್ಣೆ ವಿತರಣೆ...
ಅನೌಪಚಾರಿಕ ಪಡಿತರ ಪ್ರದೇಶ (ತುಮಕೂರು ನಗರ) ಹಾಗೂ ತಾಲೂಕುಗಳ ಪಟ್ಟಣ ಪ್ರದೇಶದ ಅಂತ್ಯೋದಯ ಹಾಗೂ ಅಕ್ಷಯ ಏಕ ಸದಸ್ಯ ಮತ್ತು ದ್ವಿಸದಸ್ಯ ಅನಿಲ ರಹಿತ ಪಡಿತರ ಚೀಟಿಗಳಿಗೆ ತಲಾ 3 ಲೀಟರ್ ಹಾಗೂ ಮೂರು ಮತ್ತು ಹೆಚ್ಚಿನ ಸದಸ್ಯ ಅನಿಲರಹಿತ ಪಡಿತರ ಚೀಟಿಗಳಿಗೆ ತಲಾ 5 ಲೀಟರ್, ಎ.ಪಿ.ಎಲ್. ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ಹಂಚಿಕೆ ಇರುವುದಿಲ್ಲ.
ತಾಲೂಕುಗಳ ಗ್ರಾಮಾಂತರ ಪ್ರದೇಶದ ಅಂತ್ಯೋದಯ ಹಾಗೂ ಅಕ್ಷಯ ಏಕ ಸದಸ್ಯ ಮತ್ತು ದ್ವಿಸದಸ್ಯ ಅನಿಲ ರಹಿತ ಪಡಿತರ ಚೀಟಿಗಳಿಗೆ ತಲಾ 3 ಲೀ. ಹಾಗೂ ಮೂರು ಮತ್ತು ಹೆಚ್ಚಿನ ಸದಸ್ಯ ಅನಿಲ ರಹಿತ ಪಡಿತರ ಚೀಟಿಗಳಿಗೆ ತಲಾ 5 ಲೀಟರ್ ಎ.ಪಿ.ಎಲ್. ರಹಿತ ಪಡಿತರ ಚೀಟಿದಾರರಿಗೆ 3 ಲೀ., ಸಿಮೆಎಣ್ಣೆ ವಿತರಣಾ ದರ ಪ್ರತಿ ಲೀಟರ್‌ಗೆ 16.50 ರು. ಆಗಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement