ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಯೋಜನೆಗಳಲ್ಲಿ ಸಾಕಷ್ಟು ಅಕ್ರಮ, ಹಣ ಪೋಲು

Vishwanath S
Updated On : 10 Dec 2013, 12:39 pm

ಕ.ಪ್ರ.ವಾರ್ತೆ ಕುಣಿಗಲ್ ಡಿ.9
ಗ್ರಾಮ ನೈರ್ಮಲ್ಯ ಮತ್ತು ಪೋಷಕಾಂಶ ನಿರ್ವಹಣೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ, ಯೋಜನೆ ನೆಪಮಾತ್ರಕ್ಕಿದ್ದು ಹಣ ಪೋಲಾಗುತ್ತಾ ಪರಿಣಾಮಕಾರಿಯಾಗಿ ಅನುಷ್ಠಾನವಾಗದಿರುವ ಬಗ್ಗೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಮುಂದಿನ ಸಭೆಯಲ್ಲಿ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದರು.
 ಸೋಮವಾರ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ತೇಜಸ್ವಿನಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಆರೋಗ್ಯ ಇಲಾಖೆಯ ಪ್ರಗತಿ ಬಗ್ಗೆ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಶಾಂತಲ ಅವರನ್ನು, ಗ್ರಾಮ ನೈರ್ಮಲ್ಯ ಮತ್ತು ಪೋಷಕಾಂಶ ನಿರ್ವಹಣೆ ಯೋಜನೆಯ ಅನುದಾನದಲ್ಲಿ 256 ಕೇಂದ್ರಗಳಿಗೆ
ತಲಾ ಹತ್ತುಸಾವಿರ ಬಿಡುಗಡೆಗೊಳಿಸಲಾಗಿದೆ. ಈ ಅನುದಾನ ಸಮರ್ಪಕ ಬಳಕೆಯಾಗದೆ, ಅನುದಾನ ಪೋಲಾಗುತ್ತಿದೆ. ಗ್ರಾಪಂ ಅಧ್ಯಕ್ಷರು, ಅಶಾಕಾರ್ಯಕರ್ತೆಯರು ನಿರ್ವಹಿಸುವ ಅನುದಾನ ಎಷ್ಟರ ಮಟ್ಟಿಗೆ ಬಳಕೆಯಾಗುತ್ತಿದೆ ಎಂದು ಪರಿಶೀಲಿಸಿದ್ದಿರಾ ಎಂದು ತರಾಟೆಗೆ ತೆಗೆದುಕೊಂಡರು. ಅಧ್ಯಕ್ಷೆ ತೇಜಸ್ವಿನಿ
ಸಹಮತ ವ್ಯಕ್ತಪಡಿಸಿ ಅನುದಾನ ಸದ್ಬಳಕೆಯಾಗುತ್ತಿಲ್ಲ ಎಂದರು. ಟಿಎಚ್‌ಒ ಸಮರ್ಪಕ ಉತ್ತರಿಸಿದಿದ್ದಾಗ ಮುಂದಿನ ಸಭೆಯಲ್ಲಿ ವಿವರ ನೀಡುವಂತೆ ಸೂಚಿಸಿದರು.
ಕ್ರಮ ಕೈಗೊಳ್ಳಿ: ಎಡ್ಸ್ ಸೋಂಕಿತರಲ್ಲಿ ಜಿಲ್ಲೆಯಲ್ಲಿ ತಾಲೂಕಿಗೆ ಎರಡನೇ ಸ್ಥಾನದಲ್ಲಿದ್ದು ಸೋಂಕಿನ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ, 19 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇರೆಬೇರೆ ಯೋಜನೆಗಳಲ್ಲಿ ವಾರ್ಷಿಕ 1.61ಲಕ್ಷ ರು. ಬಿಡುಗಡೆಯಾಗಿದೆ. ಅನುದಾನ ಸದ್ಬಳಕೆಯಾಗಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ನಿರ್ವಹಣೆಗೆ ಅನುದಾನ ಬರುತ್ತಿದ್ದರೂ ಸದ್ಬಳಕೆಯಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ, ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕೆಂದರು.
ಟಿಎಚ್‌ಒ ತಾಲೂಕಿನಲ್ಲಿ ಈವರೆಗೂ ಒಂದು ಕುಷ್ಟರೋಗ, 21 ಕ್ಷಯರೋಗ ಪ್ರಕರಣ ಪತ್ತೆಯಾಗಿದ್ದು, ಚಿಕಿತ್ಸೆ ಕೊಡಲಾಗುತ್ತಿದೆ ಎಂದರು.
ತರಾಟೆಗೆ: ಹೇಮಾವತಿ ನಾಲಾವಲಯದ ಮಾರ್ಕೋನಹಳ್ಳಿ ವಿಭಾಗದಲ್ಲಿ ಪಾರದರ್ಶಕ ನೀತಿ ಉಲ್ಲಂಘಿಸಿ, ಗುಪ್ತ ಟೆಂಡರ್ ನಡೆಯುತ್ತಿರುವ ಬಗ್ಗೆ ಎಇಇ ಗಿರೀಶ್ ಬಾಬುರನ್ನು ತರಾಟೆಗೆ ತೆಗೆದುಕೊಂಡ ಜಗದೀಶ್, ನಿಯಮ ಉಲ್ಲಂಘಿಸಿದಲ್ಲಿ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ತಾಲೂಕಿನಾದ್ಯಂತ ನಾಲಾವಲಯದ ಕೆರೆ, ನಾಲೆಪ್ರದೇಶದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕ್ರಮಮರಳು ಸಾಗಣೆ ಎಗ್ಗಿಲ್ಲದೆ ನಡೆಯುತ್ತಿದೆ, ಅಮೃತೂರು ವಲಯದ ಪೊಲೀಸರು ಕಂಡೂ ಕಾಣದಂತಿದ್ದಾರೆ. ನಾಲಾವಲಯದ ಅಧಿಕಾರಿಗಳೇ ಕ್ರಮ ಕೈಗೊಂಡು ನಿಯಂತ್ರಿಸುವಂತೆ ತಾಕೀತು ಮಾಡಿ, ಮಾರ್ಕೋನಹಳ್ಳಿ ಜಲಾಶಯಕ್ಕೆ ಸಮರ್ಪಕ ನೀರು ಹರಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದ ಮೇರೆಗೆ, ಎಇಇ ಜಲಾಶಯದ ಒಟ್ಟು ಸಾಮರ್ಥ್ಯ 88.66 ಅಡಿ ಇದ್ದು ಹಾಲಿ 250 ಕ್ಯುಸೆಕ್ ನೀರು ಬರುತ್ತಿದ್ದು ಸದ್ಯಕ್ಕೆ 69.66 ಅಡಿ ಇದೆ. ಜನವರಿ 15ವರೆಗೆ ಮಾತ್ರ ನೀರು ಹರಿಯಲಿದೆ. ಜಲಾಶಯ ತುಂಬಿಸಲು ಸಾಧ್ಯವಾಗುತ್ತಿಲ್ಲ, ಒಂದುವೇಳೆ ನಾಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದಲ್ಲಿ ಜಲಾಶಯ ತುಂಬಿಸಬಹುದೆಂದರು.
ಪ್ರಸಕ್ತ ಶೈಕ್ಷಣಿಕ ವರ್ಷಪೂರ್ಣಗೊಳ್ಳುತ್ತಾ ಬಂದರೂ, ವಿದ್ಯಾರ್ಥಿಗಳಿಗೆ ಇನ್ನು ಸೈಕಲ್ ವಿತರಿಸದಿರುವ ಬಗ್ಗೆ ಕ್ಷೇತ್ರಶಿಕ್ಷಣಾಧಾರಿಕಾರಿ ಕಚೇರಿಯ ವ್ಯವಸ್ಥಾಪಕ ಜವರಯ್ಯನವರನ್ನು ತಾಪಂ ಅಧ್ಯಕ್ಷರು ಪ್ರಶ್ನಿಸಿದಾಗ, ತಾಲೂಕಿಗೆ ಒಟ್ಟಾರೆ 2663 ಸೈಕಲ್ ಬೇಕಾಗಿದೆ. ಸರ್ಕಾರದಿಂದ ಪೂರೈಕೆಯಾಗಿಲ್ಲ. ಈ ನಿಟ್ಟಿನಲ್ಲಿ ಹಲವು ಪತ್ರ ಬರೆಯಲಾಗಿದೆ ಎಂದರು.
ಪ್ರಸಕ್ತ ಶೈಕ್ಷಣಿಕ ವರ್ಷ ಪೂರ್ಣಗೊಳ್ಳುತ್ತಿದೆ, ಇನ್ನು ಯಾವಾಗ ಸೈಕಲ್ ಕೊಡ್ತೀರಾ ಎಂದು ಜಗದೀಶ್ ತರಾಟೆಗೆ ತೆಗೆದುಕೊಂಡರು. ಬಿಇಒ ಅವರನ್ನೆ ಸಭೆಗೆ ಕರೆಯಿಸಿ ಸೂಕ್ತ ಉತ್ತರ ಪಡೆಯುವಂತೆ ಸೂಚಿಸಿದರು. ಸಭೆಯಲ್ಲಿ ತಾಪಂ ಇಒ ಶಂಕರಪ್ಪ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಕಾಧಿಕಾರಿಗಳು ಉಪಸ್ಥಿತರಿದ್ದರು.
ಆನೆಮೀನು ನಿಯಂತ್ರಣ: ಸಾಕ್ಷಿ ನೀಡಿದರೂ ಸಹಕರಿಸುತ್ತಿಲ್ಲ
ಕುಣಿಗಲ್: ಆನೆಮೀನು ನಿಯಂತ್ರಣದ ಬಗ್ಗೆ ಅಮೃತೂರು ಪಿಎಸೈ ಮತ್ತು ತಹಸೀಲ್ದಾರ್ ಅವರಿಗೆ, ಸಾಕ್ಷಿ ಅಧಾರ ಸಮೇತ ಪತ್ರ ಬರೆದು ತಿಂಗಳು ಕಳೆದರೂ ಯಾರೂ ಸಹಕರಿಸುತ್ತಿಲ್ಲ, ನಾವೇನು ಮಾಡಲಾಗದು ಎಂದು ಮೀನುಗಾರಿಕೆ ಹಿರಿಯಶ್ರೇಣಿ ಸಹಾಯಕ ನಿರ್ದೇಶಕಿ ಕಾವ್ಯ ಅಸಹಾಯಕತೆ ವ್ಯಕ್ತಪಡಿಸಿದರು.
ಸೋಮವಾರ ನಡೆದ ತಾಪಂ ಅಧ್ಯಕ್ಷರ ಪ್ರಗತಿ ಪರಿಶೀಲನೆ ಸಭೆಯಲ್ಲಿ, ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅನೆಮೀನು ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ, ಕುಣಿಗಲ್ ದೊಡ್ಡಕೆರೆ, ಕೀಲಾರ ಕೆರೆ ಸೇರಿದಂತೆ ಹಲವೆಡೆ ವ್ಯಾಪಕ ಮಾರಾಟವಾಗುತ್ತಿದೆ. ಇಲಾಖೆ ಈ ಥಳಿಯ ಮೀನು ಮಾರಾಟ ನಿಷೇಧಿಸಿದ್ದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ಸ್ಥಾಯಿಸಮಿತಿ ಅಧ್ಯಕ್ಷ ಜಗದೀಶ್ ಆಕ್ಷೇಪಿಸಿದ ಮೇರೆಗೆ, ಮೀನುಗಾರಿಕೆ ಇಲಾಖಾಧಿಕಾರಿ ಕಾವ್ಯ, ಅಮೃತೂರು ಹೋಬಳಿಯ ತೊರೆಹಳ್ಳಿಯಲ್ಲಿ ಆನೆಮೀನು ಸಾಕಾಣೆ ಮಾಡುತ್ತಿರುವ ಬಗ್ಗೆ  ಅಕ್ಟೋಬರ್ 26, 2013ರಲ್ಲಿ ತಹಸೀಲ್ದಾರ್, ಪಿಎಸೈ ಹಾಗೂ ಪಿಡಿಒ ಅವರ ಗಮನಕ್ಕೆ ತಂದರೂ ಯಾರೂ ಕ್ರಮ ಕೈಗೊಂಡಿಲ್ಲ. ಪಟ್ಟಣದಲ್ಲಿ ಇವನ್ನು ಕೆಲವಡೆ ಮಾರಾಟ ಮಾಡುತ್ತಿದ್ದು ನೊಟೀಸ್ ಜಾರಿ ಮಾಡಿದ್ದೇನೆ, ತಾಲೂಕು ಆಡಳಿತ ಸಹಕರಿಸಿದಲ್ಲಿ ಆನೆಮೀನು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement