ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶ್ರೀ ಸತ್ಯಗಣಪತಿ ಜಾತ್ರಾ ಮಹೋತ್ಸವ

Vishwanath S
Updated On : 10 Dec 2013, 12:38 pm

ತುರುವೇಕೆರೆ: ಇಲ್ಲಿಯ ಇತಿಹಾಸ ಪ್ರಸಿದ್ಧವಾಗಿರುವ ಶ್ರೀ ಸತ್ಯಗಣಪತಿಯ ವಿಸರ್ಜನಾ ಜಾತ್ರಾ ಮಹೋತ್ಸವ ಕಾರ್ಯಕ್ರಮ ಪ್ರಾರಂಭವಾಗಿದೆ.
ಬ್ರಾಹ್ಮಣ ಸಭಾದ ವತಿಯಿಂದ ಆದಿತ್ಯಾದಿ ನವಗ್ರಹ, ಶ್ರೀ ಮೃತ್ಯುಂಜಯ ಹಾಗೂ ಮಹಾಗಣಪತಿ ಹೋಮವನ್ನು ವೇದಬ್ರಹ್ಮಶ್ರೀಗಳಾದ ಮಂಜುನಾಥ್ ಶಾಸ್ತ್ರಿ, ರವಿಶಂಕರ್, ನೇತೃತ್ವದಲ್ಲಿ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ಈ ತಿಂಗಳ 24 ರ ವರೆಗೂ ಗಣಪತಿ ದೇವಾಲಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುವು. 23 ರಂದು ಗಣಪತಿಯ ಮಹಾ ಮಂಗಳಾರತಿ ನಡೆಯಲಿದೆ. 24 ರಂದು ಮಂಗಳವಾರ ಸಾಯಂಕಾಲ ಶ್ರೀ ಸತ್ಯಗಣಪತಿಯವರ ತೆಪ್ಪೋತ್ಸವ ನಡೆಯಲಿದೆ. 19 ರಿಂದ 26 ರವರೆಗೆ ದನಗಳ  ಜಾತ್ರೆ ನಡೆಯಲಿದೆ. 19 ರಂದು ಸಾರ್ವಜನಿಕರಿಂದ ಸಾವಿರಾರು ಮಂದಿಗೆ ಅನ್ನದಾನವನ್ನು ಏರ್ಪಡಿಸಲಾಗಿದೆ.
19 ರಿಂದ 26 ಜಾತ್ರೆ : ಇತಿಹಾಸ ಪ್ರಸಿದ್ಧ ಶ್ರೀ ಸತ್ಯಗಣಪತಿಯವರ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಜಾನುವಾರುಗಳ ಮಾರಾಟ ಹಾಗೂ ಕೊಳ್ಳುವ ಕಾಯಕ ನಡೆಯಲಿದೆ. ಬಹಳ ವರ್ಷಗಳಿಂದಲೂ ದನಗಳ ಜಾತ್ರೆ ನಡೆಯುತ್ತಿದ್ದು ನೀರು ಹಾಗೂ ನೆರಳಿಗೆ ಅವಕಾಶವಿದೆ. ರೈತರು ಜಾತ್ರೆಗೆ ತಮ್ಮ ಜಾನುವಾರುಗಳನ್ನು ತಂದು ಜಾತ್ರೆಗೆ ಮೆರಗು ನೀಡಬೇಕು ಎಂದು ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ ವಿನಂತಿಸಿಕೊಂಡಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement