ಕಾಟಾಚಾರದ ಕಾರ್ಯಾಗಾರಕ್ಕೆ ಪೆದ್ದಪ್ಪಯ್ಯ ಸಾಕ್ಷಿ
ತುಮಕೂರು: ಮಾನವ ಹಕ್ಕುಗಳ ಕಾರ್ಯಾಗಾರದಲ್ಲಿ ಪ್ರಮುಖ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ದೊಡ್ಡಮನೆ ಗೋಪಾಲಗೌಡ, ಇದೊಂದು ಕಾಟಾಚಾರದ ಕಾರ್ಯಾಗಾರಕ್ಕೆ ಅತ್ಯುತ್ತಮ ಉದಾಹರಣೆ. ಪ್ರತಿ ತಾಲೂಕಿನ ದಂಡಾಧಿಕಾರಿ, ಪೊಲೀಸ್ ಅಧಿಕಾರಿಗಳು ಇಂತಹ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅಧಿಕಾರಶಾಹಿಗೆ ಆಸಕ್ತಿಯಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಜವಾಬ್ದಾರಿಯಿಲ್ಲ. ಏನೋ ವರ್ಷಕ್ಕೆ ಒಮ್ಮೆ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಆಚರಿಸಿದರೆ ಆಯಿತು ಎಂಬ ಉಡಾಫೆ ಮನೋಭಾವವೇ ಇದಕ್ಕೆ ಕಾರಣ. ಜಿಪಂ ಸಭಾಂಗಣದಲ್ಲಿ ಏರ್ಪಾಟಾಗಿರುವ ಈ ಮಾನವ ಹಕ್ಕುಗಳ
ದಿನಾಚರಣೆ, ಕಾರ್ಯಾಗಾರವೇ ಉದಾಹರಣೆ ಎಂದು ಮಾರ್ಮಿಕವಾಗಿ ಮಾತು ಮುಗಿಸಿದರು.
23 ಮಂದಿ ಅಧಿಕಾರಿಗಳಿದ್ದರು: ಉದ್ಘಾಟನಾ ಸಮಾರಂಭದ ನಂತರ ನಡೆದ ಮಾನವ ಹಕ್ಕುಗಳ ಕಾರ್ಯಾಗಾರದಲ್ಲಿ ಸುಮಾರು 23 ಮಂದಿ ಆಸಕ್ತ ಅಧಿಕಾರಿಗಳಷ್ಟೇ ಪಾಲ್ಗೊಂಡಿದ್ದು, ಬೇಜವಾಬ್ದಾರಿಗೆ ಸಾಕ್ಷಿಯಾಗಿತ್ತು. ಜಿಪಂ ಸಭಾಂಗಣದ ಬಹುತೇಕ ಕುರ್ಚಿಗಳೇ ಖಾಲಿಯಾಗೇ ಉಳಿದಿದ್ದವು. ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ಖಾಲಿ ಕುರ್ಚಿಗಳನ್ನೇ ನೋಡುತ್ತಾ ಕುಳಿತಿದ್ದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿತ್ತು.