ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎಂಎಲ್ಸಿ ಕಡೆಗಣನೆ: ಆಕ್ರೋಶ

Vishwanath S
Updated On : 14 Dec 2013, 12:33 pm

ಕ.ಪ್ರ.ವಾರ್ತೆ ,  ತುಮಕೂರು ,   ಡಿ.13
ವಿಧಾನಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಅವರನ್ನು ನಗರಸಭೆ ಚೆಕ್ ವಿತರಣೆ ಕಾರ್ಯಕ್ರಮಕ್ಕೆ ಆಹ್ವಾನಿಸದೇ ನಿರ್ಲಕ್ಷಿಸಿಲಾಗಿದೆ ಎಂದು ಆರೋಪಿಸಿ ಜೆಡಿಎಸ್ ನಗರಸಭಾ ಸದಸ್ಯರು ಕಾರ್ಯಕ್ರಮವನ್ನೇ ಬಹಿಷ್ಕರಿಸಿ ಹೊರ ನಡೆದ ಘಟನೆ ಶುಕ್ರವಾರ ನಡೆದಿದೆ.
ತುಮಕೂರಿನ ಖಾಸಗಿ ಬಸ್ ನಿಲ್ದಾಣದ ಮಳಿಗೆ ಪಡೆಯಲು ಮುಂಗಡ ಹಣ ಪಾವತಿಸಿದ್ದ ಮಾಲಿಕರಿಗೆ ನ್ಯಾಯಾಲಯದ ಆದೇಶದಂತೆ ಹಣ ಹಿಂತಿರುಗಿಸಲು ಸೂಚಿಸಿದ್ದ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಚೆಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಸತ್ಯಮೂರ್ತಿ, ಶಾಸಕ ಡಾ. ರಫೀಕ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್, ನಗ ರಸಭೆ ಅಧ್ಯಕ್ಷೆ ಗೀತಾ ರುದ್ರೇಶ್, ಪ್ರಭಾರ ಆಯುಕ್ತ ಶ್ರೀನಿವಾಸ್ ಹಾಜರಿದ್ದರು. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಜೆಡಿಎಸ್ ಸದಸ್ಯ ಟಿ.ಆರ್. ನಾಗರಾಜ್ ಕಾರ್ಯಕ್ರಮಕ್ಕೆ ಎಂಎಲ್‌ಸಿ ಹುಲಿನಾಯ್ಕರ್ ಅವರನ್ನು ಏಕೆ ಆಹ್ವಾನಿಸಿಲ್ಲ ಎಂದು ಪ್ರಶ್ನಿಸಿದರು.
ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಹುಲಿನಾಯ್ಕರ್ ಅವರನ್ನು ಆಹ್ವಾನಿಸದೇ ನಿರ್ಲಕ್ಷ್ಯ ಮಾಡಿದ್ದರ ಬಗ್ಗೆ ಜಿಲ್ಲಾಧಿಕಾರಿಗಳು ಸಭೆಯಲ್ಲೇ ಸ್ಪಷ್ಟನೆ ನೀಡಬೇಕೆಂದು ಸದಸ್ಯ ನಾಗರಾಜ್ ಪಟ್ಟು ಹಿಡಿದರು.
ಆಗ ಪ್ರಭಾರ ಆಯುಕ್ತ ಶ್ರೀನಿವಾಸ್ ಹುಲಿನಾಯ್ಕರ್ ಅವರನ್ನು ಆಹ್ವಾನಿಸದೇ ತಪ್ಪು ಮಾಡಲಾಗಿದೆ ಎಂದು ಒಪ್ಪಿಕೊಂಡರು.
ಈ ಸಂದರ್ಭದಲ್ಲಿ ಸಂಬಂಧಿಸಿದ ಪ್ರಭಾರ ಆಯುಕ್ತರಿಗೆ ನೋಟೀಸ್ ನೀಡಿ ಎಂದು ಅಧ್ಯಕ್ಷರಿಗೆ ತಾಕೀತು ನೀಡಿ ವಿರೋಧ ಪಕ್ಷದ ನಾಯಕ ಹನುಮಂತರಾಯಪ್ಪ ನೇತೃತ್ವದಲ್ಲಿ ನಾಗರಾಜ್, ಲೋಕೇಶ್, ಟಿ.ಎಚ್. ಬಾಲಕೃಷ್ಣ, ಪ್ರೆಸ್ ರಾಜಣ್ಣ ಕಾರ್ಯಕ್ರಮ ಬಹಿಷ್ಕರಿಸಿ ಹೊರ ನಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement