ಜನಪ್ರತಿನಿಧಿಗಳ ಗ್ರಾಮ ಪ್ರದಕ್ಷಿಣೆ ವೇಳೆ ಸಮಸ್ಯೆಗಳ ದರ್ಶನ
ತುರುವೇಕೆರೆ: ಎತ್ತ ನೋಡಿದರೂ ತಿಪ್ಪೆಗಳ ರಾಶಿ... ಚರಂಡಿಗಳು ಇಲ್ಲದ ಕಾರಣಕ್ಕೆ ಮನೆ ದಾರಿ ಮೇಲೆಯೇ ಹರಿದು ಬರುತ್ತಿರುವ ಚರಂಡಿ ನೀರು.. ಕುಡಿಯುವ ನೀರಿಗಂತೂ ತೊಂದರೆ ಇಲ್ಲ ಆದರೂ ನೀರು ಬಿಡುವ ನೀರುಗಂಟಿಯ ಸಮಸ್ಯೆ, ಹಾಳಾಗಿ ಹೋಗಿರುವ ಪೈಪುಲೈನ್. ಕಿತ್ತು ಬಂದಿರುವ ಡಾಂಬಾರು ರಸ್ತೆ. ಚರಂಡಿ ನೀರೆಲ್ಲಾ ಮನೆಯ ತಳಹದಿಯೊಳಗೇ ಹೋಗುವ ಸ್ಥಿತಿ. ಜೊತೆಗೆ ಸೊಳ್ಳೆಗಳ ಕಾಟ.
ಇದು ಮಾಯಸಂದ್ರ ಗ್ರಾಮದ ನಿವಾಸಿಗಳು ಪ್ರತಿದಿನವೂ ಅನುಭವಿಸುತ್ತಿರುವ ಸಂಕಷ್ಟ ಗಳ ಸರಮಾಲೆ. ಜಿಪಂ ಸದಸ್ಯ ಶ್ರೀನಿವಾಸ್ ಗ್ರಾಮದ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಪಂಚಾಯ್ತಿ ಅಧ್ಯಕ್ಷೆ ಜಯಂತಿ ಪ್ರಕಾಶ್, ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ ಶಶಿಕುಮಾರ್, ಪಿಡಿಒ ಮಂಜಮ್ಮ, ಕಾರ್ಯದರ್ಶಿ ಸುರೇಶ್ ಹಾಗೂ ಸದಸ್ಯರನ್ನು ಒಳಗೊಂಡಂತೆ ಮಾಡಿದ ಗ್ರಾಮ ಪ್ರದಕ್ಷಿಣೆ ವೇಳೆ ಕಂಡ ಸಾಕ್ಷಾತ್ ದರ್ಶನ.
ಗ್ರಾಪಂ ಅಧ್ಯಕ್ಷೆ ಜಯಂತಿ ಪ್ರಕಾಶ್, ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ ಶಶಿಕುಮಾರ್, ಸದಸ್ಯರಾದ ಕಮಲಮ್ಮ ಕೆಂಪೇಗೌಡ, ಗುರುಪ್ರಸಾದ್, ಗೀತಾ ಶೇಖರ್, ಮುಸ್ತರಿಬಾಬು, ಸವಿತಾ ಶಿವಕುಮಾರ್, ರಂಗನಾಥ್, ಗೀತಾಬಾಲು, ಸುಬ್ರಹ್ಮಣ್ಯ, ಸುನಂದಮ್ಮ ಸುರೇಶ್, ರವಿಕುಮಾರ್, ಚಂದ್ರಪ್ರಭು, ಟಿ.ನಾಗೇಶ್, ಹಿರಿಯ ಗ್ರಾಮಸ್ಥರು, ಸ್ವಾತಂತ್ರ್ಯ ಹೋರಾಟಗಾರ ಎಂ.ಹೆಚ್.ನರಸಿಂಹಯ್ಯ ಭಾಗವಹಿಸಿದ್ದರು.