ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಾನವ ಹಕ್ಕು ದಮನ ನಿಲ್ಲಲಿ: ಬಿ.ಸಿ. ಶೈಲಾ

Vishwanath S
Updated On : 14 Dec 2013, 12:33 pm

ತುಮಕೂರು: ಮಾನವ ಹಕ್ಕುಗಳ ರಕ್ಷಣೆಗೆ ನಾಗರಿಕ ಸಮಾಜ ಪಣ ತೊಡಬೇಕಾಗಿದೆ ಎಂದು ಲೇಖಕಿ ಬಿ.ಸಿ.ಶೈಲಾ ನಾಗರಾಜ್ ಅಭಿಪ್ರಾಯಪಟ್ಟರು.
ಅವರು ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ ನಗರದಲ್ಲಿ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಲ್ಲಿಯೂ ಪರಸ್ಪರ, ಗೌರವ, ಪ್ರೀತಿ, ವಿಶ್ವಾಸ, ನಂಬಿಕೆ, ಭರವಸೆಗಳೇ ಮಾನವ ಹಕ್ಕುಗಳ ರಕ್ಷಣೆಗೆ ಮೂಲಾಧಾರ. ಇಂದು ಸಾಮಾಜಿಕ ವಲಯ ಹಾಗೂ ಕೌಟುಂಬಿಕ ವಲಯಗಳಲ್ಲಿ ಭಯ, ಅಶಾಂತಿ, ಅಭದ್ರತೆ, ಅಸುರಕ್ಷತೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಮಿತಿ ಮೀರಿವೆ. ಎಲ್ಲೆಡೆ ಮಾನವ ಹಕ್ಕುಗಳ ದಮನ ಆಗುತ್ತಿದೆ. ಕಾನೂನುಗಳ ಉಲ್ಲಂಘನೆ ಮಾನವ ಹಕ್ಕುಗಳ ಪ್ರತಿಷ್ಠಾಪನೆಗೆ ಅಡ್ಡಿಯಾಗಿದೆ ಎಂದರು.
ಇಂದು ಎಲ್ಲ ರಂಗಗಳಲ್ಲೂ ಗಂಡು ಮತ್ತು ಹೆಣ್ಣು ಸಮಾನವಾಗಿ ದುಡಿಯುತ್ತಿದ್ದರೂ ಸಮಾನತೆ ಪರಸ್ಪರರಲ್ಲಿ ಕಾಣದಾಗಿದೆ. ಪುರುಷ ಪ್ರಧಾನ ವ್ಯವಸ್ಥೆ ಸದಾ ದೌರ್ಜನ್ಯ ಪೂರಿತವಾಗಿ ವರ್ತಿಸುತ್ತಿರುವುದರಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿ ಅತ್ಯಾಚಾರ,
ಅನಾಚಾರಗಳು ಮೇರೆ ಮೀರಿವೆ. ಮೊಟ್ಟ ಮೊದಲು ಸಮಾಜ ಹೆಣ್ಣು ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಮಾಡಿದಾಗ ಮಾತ್ರ ಮಾನವ ಹಕ್ಕುಗಳ ರಕ್ಷಣೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಸಂಚಾಲಕ ಜಯದೇವ ಸಿಂದಗಿ ಮಾತನಾಡಿ ಕುಟುಂಬ ವಲಯಗಳಲ್ಲಿ ಹಕ್ಕುಗಳ ರಕ್ಷಣೆಯಾದರೆ ಸಾಮಾಜಿಕ ವಲಯದಲ್ಲೂ ಅದು ಪ್ರತಿಷ್ಠಾಪನೆಯಾಗುತ್ತದೆ. ದೌರ್ಜನ್ಯಗಳು ಇಲ್ಲವಾಗುತ್ತದೆ ಎಂದರು.
ಕುಮಾರಸ್ವಾಮಿ, ಚಂದ್ರಕಲಾ, ಲಲಿತಮ್ಮ, ಭಾರತಿ, ಶಾಂತಕುಮಾರಿ, ಪ್ರಮೀಳಾ ಮುಂತಾದವರು ಮಾತನಾಡಿದರು. ವೇದಿಕೆ ಸದಸ್ಯರು ಜಾಗೃತಿ ಗೀತೆ ಹಾಡಿದರು. ಮಾನವ ಹಕ್ಕುಗಳ ರಕ್ಷಣೆಯ ಪ್ರಮಾಣ ವಚನ ಸ್ವೀಕರಿಸುವುದರ ಮೂಲಕ ಪ್ರಾರಂಭಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement