ಇಂದು ಕೆ.ಬಿ.ಸಿದ್ದಯ್ಯ, ಗುಡಿಹಳ್ಳಿಗೆ ಅಭಿನಂದನೆ
ತುಮಕೂರು: ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಾಟಕಮನೆ ವತಿಯಿಂದ ಡಿ.15 ರ ಭಾನುವಾರದಂದು ಹಿರಿಯ ಸಾಹಿತಿಗಳಾದ ಪ್ರೊ.ಕೆ.ಬಿ.ಸಿದ್ದಯ್ಯ ಮತ್ತು ಹಿರಿಯ ರಂಗಚಿಂತಕ ಗುಡಿಹಳ್ಳಿ ನಾಗರಾಜು ಅವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ತಮ್ಮ ವಿಶಿಷ್ಟ ಬರವಣಿಗೆ ಶೈಲಿಯ ಮೂಲಕ ಹೆಸರಾಗಿರುವ ಪ್ರೊ.ಕೆ.ಬಿ.ಸಿದ್ದಯ್ಯ ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕೆಂಕೆರೆ ಗ್ರಾಮದವರು. ಇವರ ಸದಭಿರುಚಿಯ ಬರವಣಿಗೆ ಮೂಲಕ ನಾಡಿನಾದ್ಯಂತ ಹೆಸರಾದವರು.ರಂಗಚಿಂತಕ ಗುಡಿಹಳ್ಳಿ ನಾಗರಾಜು ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕು ಗುಡಿಹಳ್ಳಿಯವರು. ತಮ್ಮ ಬರಹಗಳ ಮೂಲಕ ರಂಗಭೂಮಿಗೆ ಆಪಾರವಾದ ಕೊಡುಗೆ ನೀಡಿರುವ ಗುಡಿಹಳ್ಳಿಯವರ ಮರಿಯಮ್ಮನ ಹಳ್ಳಿ ರಂಗಸಿರಿ, ರಂಗನಾಟಕ ಪ್ರಯೋಗ ಸಾರ್ಥಕತೆ, ನಟಿ ಮಾಲತಿ ಶ್ರೀ, ಮೈಸೂರು ಆತ್ಮಕಥೆ, ತೆರೆಸರಿದಾಗ ಮತ್ತಿತರರ ಕೃತಿಗಳ ಮೂಲಕ ಯುವ ಪೀಳಿಗೆಗೆ ರಂಗಭೂಮಿಯನ್ನು ಪರಿಚಯಿಸಿದವರು.