ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಮಹಿಳೆಯರ, ಮಕ್ಕಳ ಹಕ್ಕುಗಳ ಮಾರಣಹೋಮ'

Vishwanath S
Updated On : 19 Dec 2013, 12:49 pm

ತುಮಕೂರು: ದುರ್ಬಲರ ರಕ್ಷಣೆಯ ಸಾಧನಗಳಾಗಿರಬೇಕಾದ ಕಾನೂನುಗಳು ಪ್ರಬಲರ ಅಸ್ತ್ರಗಳಾಗಿದ್ದು ಪ್ರಾಣಿ ಪ್ರಪಂಚದ ಸಣ್ಣ ಮೀನು ದೊಡ್ಡ ಮೀನನ್ನು ನುಂಗುವಂತಹ ಪರಿಸ್ಥಿತಿ ಸಮಾಜದಲ್ಲಿ ಉದ್ಭವಿಸಿದೆ. ಮಹಿಳೆಯರ ಹಾಗೂ ಮಕ್ಕಳ ಹಕ್ಕುಗಳ ಮಾರಣ ಹೋಮ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ವಿಷಾದಿಸಿದರು.
ಅವರು ವಿಶ್ವ ಮಾನವ ಹಕ್ಕುಗಳ ಪ್ರಯುಕ್ತ ನಗರದ ವಿದ್ಯಾನಿಧಿ ಪ.ಪೂ. ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈವರೆಗೆ ಸರ್ಕಾರ ಮಾನವ ಹಕ್ಕುಗಳ ಆಯೋಗ ಹಾಗೂ ಮಹಿಳಾ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡದೆ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿರುವ ಬಗ್ಗೆ ಟೀಕಿಸಿದರು.
ಬದುಕು ಬಿಡು ಎಂಬ ಉದಾತ್ತ ತತ್ವವೇ ಮಾನವ ಹಕ್ಕುಗಳ ತಳಪಾಯ ಎಂದು ತಿಳಿಸಿದ ಅವರು ಬಸವಣ್ಣನವರ ಕಳಬೇಡ, ಕೊಲಬೇಡ ವಚನವು ಕಾಲ ದೇಶಗಳ ಎಲ್ಲೆಯನ್ನು ಮೀರಿ ಅಳವಡಿಸಿಕೊಳ್ಳಬೇಕಾದ ಉದಾತ್ತ ಚಿಂತನೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.
ಪ್ರಧಾನ ಉಪನ್ಯಾಸ ನೀಡಿದ ವಕೀಲ ಎಸ್. ಮಂಜುನಾಥ್ ಅವರು ಮಾನವ ಹಕ್ಕುಗಳ  ಪರಿಕಲ್ಪನೆ, ಔನ್ನತ್ಯದ ಬಗ್ಗೆ ತಿಳಿಸಿದರು.
ಮಾನವನಾಗಿರುವುದರಿಂದಲೇ ಮಾನವ ಹಕ್ಕುಗಳು ಬಂದಿದ್ದು. ಮತ್ತೊಬ್ಬರ ಹಕ್ಕುಗಳನ್ನು ಗೌರವಿಸುವಂತಾದಾಗ ಮಾತ್ರ ಅವು ಅರ್ಥಪೂರ್ಣವಾಗುತ್ತದೆ ಎಂದರು.
ಇತ್ತೀಚೆಗೆ ಮಾನವ ಹಕ್ಕುಗಳ ಉಲ್ಲಂಘನೆ ಸತತವಾಗಿ ನಡೆಯುತ್ತಿದ್ದು ಈ ಬಗ್ಗೆ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದರು.
ವರದಕ್ಷಿಣೆ ವಿರೋಧಿ ಸಂಸ್ಥೆ ಉಪಾಧ್ಯಕ್ಷೆ ಎಂ.ಸಿ. ಲಲಿತಾ ಈವರೆಗೆ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣದಲ್ಲಿ ವೇದಿಕೆಯ ಕ್ರಿಯಾಶೀಲತೆ ಬಗ್ಗೆ ವಿವರಿಸಿದರು. ವಿದ್ಯಾವಾಹಿನಿ ಸಂಸ್ಥೆ ಸ್ಥಾಪಕ ಕೆ.ಬಿ. ಜಯಣ್ಣನವರು ಪಠ್ಯದಲ್ಲಿ ಮಾನವ ಹಕ್ಕುಗಳ ಬಗ್ಗೆ ವಿವರವಾಗಿ ತಿಳಿಸಿಕೊಡುವ ಅಗತ್ಯವಿದೆ ಎಂದು ತಿಳಿಸಿದರು. ಪ್ರಾಂಶುಪಾಲ ಸಿದ್ದೇಶ್ವರ ಸ್ವಾಮಿ ಸ್ವಾಗತಿಸಿದರು. ಮಮತಾ ರವಿಕುಮಾರ್, ಗಂಗಲಕ್ಷ್ಮೀ,  ಪಾರ್ವತಮ್ಮ, ಲಲಿತಾ ಮಲ್ಲಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement