ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿಎಸ್ಸೆಸ್ಸೆನ್ ಸೊಸೈಟಿ ಕಾರ್ಯದರ್ಶಿ ಮನೆ ಜಫ್ತಿ

Vishwanath S
Updated On : 21 Dec 2013, 1:29 am

ಕ.ಪ್ರ.ವಾರ್ತೆ ,  ಗುಬ್ಬಿ ,  ಡಿ.20
ತಾಲೂಕಿನ ಕೊಂಡ್ಲಿ ಗ್ರಾಮದ ವಿಎಸ್‌ಎಸ್‌ಎನ್ ಸೊಸೈಟಿ ಕಾರ್ಯದರ್ಶಿ ಎಂ.ಉಮೇಶ್ ಮೂರಂತಸ್ತಿನ ಕಲ್ಪವೃಕ್ಷ ನಿವಾಸಕ್ಕೆ ಮುಂಜಾನೆ 6 ರ ಸಮಯದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಎಸ್‌ಪಿ ರಮೇಶ್‌ಚಂದ್ರ ಹಾಗೂ ತಂಡ 43 ಲಕ್ಷ ನಗದು, ರು. 7 ಲಕ್ಷ ಬೆಲೆ  ಬಾಳುವ ಚಿನ್ನಾಭರಣ, 1.5 ಕೆಜಿ ತೂಕದ ಸುಮಾರು ರು. 60 ಸಾವಿರ ಬೆಲೆ ಬಾಳುವ ಬೆಳ್ಳಿ ಸಾಮಾಗ್ರಿ ಹಾಗೂ 52 ಲಕ್ಷ ಬೆಲೆ ಬಾಳುವ ಮನೆಯನ್ನು ವಶಕ್ಕೆ ಪಡೆದು, ದಾಖಲಾತಿ ಪರಿಶೀಲಿಸಿದ್ದಾರೆ.
ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿನ ಕಲ್ಪವೃಕ್ಷ  ನಿವಾಸದ ಮೇಲೆ ಶುಕ್ರವಾರ ಮುಂಜಾನೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ತಂಡ ಸುಮಾರು ರು. ಒಂದು ಕೋಟಿಗೂ ಮೀರಿದ ಅಕ್ರಮ ಆಸ್ತಿ ವಶಕ್ಕೆ ಪಡೆದಿದೆ. ಮುಂಜಾನೆ 5.30ರ ಸಮಯದಲ್ಲಿ ಧುನುರ್ಮಾಸ ಪೂಜೆಗಾಗಿ ಮನೆಯಿಂದ ಹೊರ ನಡೆದ ಉಮೇಶ್ ದಂಪತಿ ದಾಳಿಯ ವಿಚಾರ ತಿಳಿದು ನಾಪತ್ತೆಯಾಗಿದ್ದಾರೆ. ಮನೆಗೆ ದಾಳಿ ಮಾಡಿದ ಲೋಕಾಯುಕ್ತರು ಸುಮಾರು 10 ತಾಸುಗಳ ಕಾಲ ಸುದೀರ್ಘವಾಗಿ ಉಮೇಶ್ ಮಕ್ಕಳ ಮುಂದೆ ತನಿಖೆ ನಡೆಸಿದರು. ತಂಡದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಶ್ರೀನಿವಾಸ್, ಇನ್ಸ್‌ಪೆಕ್ಟರ್ ಗೌತಮ್, ಸಬ್‌ಇನ್ಸ್‌ಪೆಕ್ಟರ್ ಗಂಗಲಿಂಗಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement