ಕನ್ನಡ ತಾತ್ಸಾರ ಸಲ್ಲ: ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಕನ್ನಡಪ್ರಭ ವಾರ್ತೆ ತುಮಕೂರು ಡಿ.22
ಕನ್ನಡ ಭಾಷೆ ಬಗ್ಗೆ ಹೊಂದಿರುವ ತಾತ್ಸಾರ ಮನೋಭಾವ ದೂರಮಾಡಬೇಕಿದೆ ಎಂದು ಖ್ಯಾತ ಸಾಹಿತಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಕರೆ ನೀಡಿದರು.
ತುಮಕೂರಿನ ಮಾರುತಿ ನಗರದಲ್ಲಿ ಜಾಗೃತಿ ವೇದಿಕೆ ಮತ್ತು ಜಾಗೃತಿ ಮಹಿಳಾ ಮಂಡಳಿಯ 17ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಮಮ್ಮಿ, ಡ್ಯಾಡಿ ಸಂಸ್ಕೃತಿಯನ್ನು ಹೋಗಲಾಡಿಸಿ ಅಪ್ಪ, ಅಮ್ಮ ಎಂದು ಹೇಳಿಸುವ ಮೂಲಕ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದರ ಜೊತೆಗೆ ಮಕ್ಕಳಿಗೆ ಮನೆಯಲ್ಲಿ ಕನ್ನಡ ಕಲಿಸಬೇಕೆಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಸಾಹಿತಿ ಲಕ್ಷ್ಮೀನಾರಾಯಣ ಭಟ್ಟರು ಮತ್ತು ಸಂಗೀತ ವಿದ್ವಾಂಸ ಲೋಲಾಕ್ಷಿ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ಸಂಸದ ಜಿ.ಎಸ್. ಬಸವರಾಜು, ನಗರಸಭೆ ಅಧ್ಯಕ್ಷೆ ಗೀತಾ ರುದ್ರೇಶ್, ನಗರಸಭಾ ಸದಸ್ಯರಾದ ಜಯಮ್ಮ, ಜನಾರ್ಧನ್, ಅಭಿವೃದ್ದಿ ರೆವಲ್ಯೂಷನ್ನ ಕುಂದರನಹಳ್ಳಿ ರಮೇಶ್, ಜಾಗೃತಿ ವೇದಿಕೆಉಪಾಧ್ಯಕ್ಷ ಕೆ.ಜಿ. ನಂಜುಂಡೇಶ್ವರ, ಪ್ರಧಾನ ಕಾರ್ಯದರ್ಶಿ ಜಯಸಿಂಹ, ಸಹ ಕಾರ್ಯದರ್ಶಿ ಎಚ್.ಎಮ್.ಎಸ್. ರಾಮಪ್ರಸಾದ್, ಮಹಿಳಾ ಮಂಡಳಿ ಅಧ್ಯಕ್ಷೆ ಸಾವಿತ್ರಿ ಶಿವಶಂಕರ್, ಉಪಾಧ್ಯಕ್ಷ ಸರೋಜಮ್ಮ ಮತ್ತಿತರರು ಉಪಸ್ಥಿತರಿದ್ದರು.