'ಗ್ರಾಮೀಣ ಜನತೆ ಒಗ್ಗಟ್ಟು ಪ್ರದರ್ಶಿಸಲಿ'
ಶಿರಾ: ದ್ವೇಷ-ಅಸೂಯೆ ದೂರವಾದಾಗ ಹಳ್ಳಿ ಜನರಲ್ಲಿ ಸಾಮರಸ್ಯ ಮೂಡಿ ಗ್ರಾಮಗಳ ಏಳಿಗೆ ಸಾಧ್ಯ. ಈ ನಿಟ್ಟನಲ್ಲಿ ಗ್ರಾಮೀಣರು ರಾಜಕೀಯ, ಜಾತಿ-ಬೇಧ ಮರೆತು ಅಣ್ಣ-ತಮ್ಮಂದಿರಂತೆ ಬಾಳ್ವೆ ಮಾಡಬೇಕು ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಕಿವಿಮಾತು ಹೇಳಿದರು.
ಶಿರಾ ತಾಲೂಕಿನ ಬೆಜ್ಜಿಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶಿರಾ ನಗರ ಮತ್ತು ಕಳ್ಳಂಬೆಳ್ಳ ಕೆರೆ ಮತ್ತು ತುಮಕೂರು ನಗರ ಸೇರಿದಂತೆ ಜಿಲ್ಲೆಯ ಕೆರೆಗಳಿಗೆ ಹೇಮಾವತಿ ಜಲಾನಯನ ಪ್ರದೇಶದಿಂದ ನೀರು ಹರಿಸಲು ಕಾಲವೆಗಳು ಕಿರಿದಾಗಿದ್ದು, ಈ ಮೂಲಕ ಹಾದು ಹೋಗುವ ನೀರು ಚಾನಲ್ನಲ್ಲಿಯೇ ಇಂಗಿ ಕೆರೆಗಳಿಗೆ ನಿಗದಿತ ಅವಧಿಯೊಳಗೆ ನೀರು ಹೋಗದ ಕಾರಣ ಕೆರೆಗಳು ನಿರಿಕ್ಷೀತ ಸಮಯಕ್ಕೆ ತುಂಬಿಸಲು ಕಷ್ಟ ಸಾಧ್ಯವಾಗಿರುವುದರಿಂದ ಸಮಸ್ಯೆಗೆ ಪರಿಹಾರವಾಗಿ ಸರ್ಕಾರ ಕಾಲುವೆ ಅಗಲಿಕರಣಕ್ಕೆ ಕ್ರಿಯಾ ಯೋಜನೆ ರೂಪಿಸಿ ಮಂಜೂರಾತಿ ನೀಡಿದೆ ಎಂದರು. ಕಾಂಗ್ರೆಸ್ ಮುಖಂಡ ಮಲ್ಲೇಗೌಡ ಅಧ್ಯಕ್ಷತೆ ವಹಿಸಿದ್ದರು. ಆರ್.ಚಂದ್ರಯ್ಯ, ಚಂದ್ರಶೇಖರಯ್ಯ, ಎಂ.ರವೀಂದ್ರ, ಬೆಸ್ಕಾಂ ಜಗದೀಶ್, ಎಪಿಎಂಸಿ ಅಧ್ಯಕ್ಷ ಶಶಿಧರಗೌಡ, ಗೋವಿಂದೇಗೌಡ, ಪಿಎಸ್ಐ ಎಫ್.ಕೆ. ನದಾಫ್, ತ್ರಿಮೂರ್ತಿ, ರಂಗನಾಥ್, ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.