ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಲೈಂಗಿಕ ಕಾರ್ಯಕರ್ತೆಯರೆಡೆಗಿನ ದೃಷ್ಚಿಕೋನ ಬದಲಾಗಲಿ

Vishwanath S
Updated On : 23 Dec 2013, 1:00 am

ಕನ್ನಡಪ್ರಭ ವಾರ್ತೆ ತುಮಕೂರು ಡಿ.22
ಬಡತನ ಮತ್ತು ಕೌಂಟುಬಿಕ ಹಿನ್ನೆಲೆಗಳು ಮಹಿಳೆಯರನ್ನು ಲೈಂಗಿಕ ವೃತ್ತಿಗೆ ತಳ್ಳುತ್ತಿದ್ದು, ಪರಿಸ್ಥಿತಿಯ ಕೈಗೊಂಬೆಯಾಗಿ ಬದಕುವ ಇವರನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ ಹಿರಿಯ ವ್ಯವಸ್ಥಾಪಕ ಬಾಲಸುಬ್ರಮಣ್ಯ ಅಭಿಪ್ರಾಯಪಟ್ಟರು.
ಒಂದುಗೂಡು ಮಹಿಳಾ ಸಂಘ, ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ ಟ್ರಸ್ಟ್, ಸಿಸಾರ್ ಸಂಸ್ಥೆ ಹಾಗೂ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಿದ್ದ ಲೈಂಗಿಕ ವೃತ್ತಿನಿರತ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಕುರಿತು ಜಿಲ್ಲಾ ಮಟ್ಟದ ಮಾಧ್ಯಮ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರ್ಥಿಕ, ಸಾಮಾಜಿಕ ಹಾಗೂ ಅಭಿವೃದ್ಧಿ ಸ್ಥಿತಿಗತಿಗಳು ಮಹಿಳೆಯನ್ನು ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದೆ. ಇವರು ನಮ್ಮಂತೆಯೇ ಮನುಷ್ಯರು ಎಂಬುದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಲೈಂಗಿಕ ಕಾರ್ಯಕರ್ತೆಯರು ಇತ್ತೀಚಿನ ದಿನಗಳಲ್ಲಿ ಏಡ್ಸ್ ಮತ್ತು ಹೆಚ್‌ಐವಿ ರೋಗ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಹೆಚ್‌ಐವಿ, ಏಡ್ಸ್‌ನಿಂದ ದೂರವಿದ್ದು, ತಮ್ಮ ಬಳಿ ಲೈಂಗಿಕ ಸುಖ ಅರಸಿ ಬರುವ ಗಂಡಸರು ಮತ್ತು ಅವರ ಕುಟುಂಬದ ಆರೋಗ್ಯವನ್ನು ಕಾಡುವ ಜೊತೆಗೆ ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದರು.
ರಾಜ್ಯದ 15 ಜಿಲ್ಲೆಗಳಲ್ಲಿ ಸುಮಾರು 30 ಸಾವಿರ ಲೈಂಗಿಕ ವೃತ್ತಿನಿರತ ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರ ಪುನರ್ ವಸತಿಗೆ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಹಲವು ಯೋಜನೆಗಳಲ್ಲಿ ಇವರನ್ನು ತೊಡಗಿಸಿಕೊಂಡು ಹೆಚ್‌ಐವಿ ಮತ್ತು ಏಡ್ಸ್ ನಿಯಂತ್ರಣಕ್ಕೆ ಮುಂದಾಗಿದೆ. ಅಲ್ಲದೆ ಲೈಂಗಿಕ ವೃತ್ತಿಗೆ ಇಳಿಯುತ್ತಿರುವ ಹದಿಹರೆಯದ ಹೆಣ್ಣು ಮಕ್ಕಳಿಗೆ ತಿಳಿ ಹೇಳಿ ಅವರು ಇಂತಹ ವೃತ್ತಿಗೆ ಇಳಿಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರವೀಂದ್ರ ಹೆಗಡೆ, ಈ ಹಿಂದೆ ಯಾವುದೇ ಲೈಂಗಿಕ ವೃತ್ತಿ ನಿರತರು ಸಹ ನಾವು ವೃತ್ತಿಯಲ್ಲಿದ್ದೇನೆ ಎಂದು ಹೇಳಿಕೊಳ್ಳಲು ಮುಂದೆ ಬರುತ್ತಿರಲಿಲ್ಲ. 2007ರಲ್ಲಿ ಕರ್ನಾಟಕ ರಾಜ್ಯದಲ್ಲಿ ಸಂವೇದನ ಯೋಜನೆ ಜಾರಿಗೊಳಿಸಲಾಯಿತು.
ಇಂತಹ ಸಮಸ್ಯೆಯನ್ನು ಗುರಿಯಾಗಿಸಿಕೊಂಡು ಸಂಘಟನೆ ಮಾಡುವುದು ಅಷ್ಟು ಸುಲಭ ಕೆಲಸವಾಗಿರಲಿಲ್ಲ. ಈ ಯೋಜನೆಯನ್ನು ರಾಜ್ಯದಲ್ಲಿ 15 ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಸುಮಾರು 1,450 ವೃತ್ತಿನಿರತ ಲೈಂಗಿಕ ಕಾರ್ಯಕರ್ತೆಯರು ನೋಂದಣಿ ಮಾಡಿಕೊಂಡಿದ್ದಾರೆ. ಇವರಿಗೆ ಒಂದುಗೂಡು ಮಹಿಳಾ ಸಂಘದ ಮೂಲಕ ವಿವಿಧ ರೀತಿಯ ತರಬೇತಿ, ಕಾನೂನಿನ ಅರಿವು, ಹಕ್ಕು ಬಾಧ್ಯತೆಗಳ ತಿಳುವಳಿಗೆ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಮಾಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ  ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement