ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಸ್ತುಪ್ರದರ್ಶನ ಉದ್ಘಾಟನೆ

Vishwanath S
Updated On : 24 Dec 2013, 12:46 pm

ಚಿಕ್ಕನಾಯಕನಹಳ್ಳಿ: ಮನುಷ್ಯನಲ್ಲಿರುವ ಪರಿಪೂರ್ಣತೆಯನ್ನು ಪ್ರಕಾಶಿಸುವಂತೆ ಪ್ರೋತ್ಸಾಹಿಸುವುದೇ ಶಿಕ್ಷಣ ಎಂದು ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್  ಅಧ್ಯಕ್ಷಕೆ.ಎಸ್.ಕಿರಣ್ ಕುಮಾರ್ ನುಡಿದರು. ಅವರು ಪಟ್ಟಣದಲ್ಲಿ ಏರ್ಪಡಿಸಿದ್ದ ಶಾಲಾವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗ್ರಾಮೀಣ ಭಾಗದ ಮಕ್ಕಳು ಕೇಂದ್ರೀಯ ಪಠ್ಯಕ್ರಮದ ಶಿಕ್ಷಣದಿಂದ ವಂಚಿತವಾಗಬಾರದೆಂಬ ಮಹಾತ್ವಾಕಾಂಕ್ಷೆಯಿಂದ ಹುಳಿಯಾರು ಮತ್ತು ಪಟ್ಟಣದಲ್ಲಿ ಶಾಲೆಗಳನ್ನು ತೆರೆಯಲಾಗಿದೆ.
  ಹುಟ್ಟಿನಿಂದಲೇ  ಮಕ್ಕಳಲ್ಲಿ ಜ್ಞಾನಭಂಡಾರವಿರುತ್ತದೆ. ಹೊರಗಿನಿಂದ ಯಾವ ಜ್ಞಾನವೂ ಬರುವುದಿಲ್ಲ. ಅದನ್ನು ಗುರುತಿಸುವ ಕ್ರಿಯೆ ಗುರುವಿನಿಂದಾಗಬೇಕಾಗಿದೆ. ಯಾವ ಬಗೆಯ ಶಿಕ್ಷಣದದಿಂದ ಶೀಲ ರೂಪುಗೊಳ್ಳುಗೊಳ್ಳುವುದೋ,ವೃದ್ಧಿಯಾಗುವುದೋ, ಬುದ್ಧಿ ವಿಕಾಸಗೊಳ್ಳುವುದೋ ಮತ್ತು ಯಾವುದರಿಂದ ನಾವು ನಮ್ಮ ಸ್ವಂತ ಕಾಲಮೇಲೆ ನಿಲ್ಲಬಲ್ಲವೋ ಅಂತಹ ಶಿಕ್ಷಣ ನಮಗೆ ಅತ್ಯವಶ್ಯಕ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಆದ್ದರಿಂದ ಪಠ್ಯಚಟುವಟಿಕೆ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯು ಮ್ಕಕಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಈ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದರು.  ಎಚ್.ಬಿ. ಪಂಚಾಕ್ಷರಿ, ಎಂ.ಎಂ. ಜಗದೀಶ್, ವಸಂತಕುಮಾರ್, ಸಂಸ್ಥೆಯ ಕಾರ್ಯದರ್ಶಿ ಕೆ.ಬಿ. ಕವಿತಾ, ಪ್ರಾಂಶುಪಾಲ ರವಿ.ಟಿ.ಎಸ್ ಇತರರಿದ್ದರು.
ಪ್ರೊ.ಮ.ಲ.ನ.ಮೂರ್ತಿ ಸಂತಾಪ
ಮಧುಗಿರಿ:  ರಾಷ್ಟ್ರ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಮಾನವತವಾದಿ ತನ್ನ ಸಾವಿನಲ್ಲಿಯೂ ಮನುಜ ಮತ, ವಿಶ್ವಪಥವನ್ನು ತೋರಿದವರು. ಅವರ ಕೃತಿಗಳು ಸದಾ ಹಸಿರಾದವು. ಕಾವ್ಯಕ್ಕಿಂತ ಬದುಕು ದೊಡ್ಡದು ಎಂದು ನಂಬಿದ್ದ ಕವಿ ಇತರರಿಗೆ ಮಾದರಿಯಾಗಿದ್ದರು. ಎಂದು ಯಾರ ಎದುರಿಗೂ ತಲೆ ಬಾಗಿದವರಲ್ಲ, ನೇರ ನುಡಿ, ಆಳವಾದ ಅರಿವು ಅವರನ್ನು ಅಮರ ಜೀವಿಯನ್ನಾಗಿಸಿದೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಅವರ ನಿಧನಕ್ಕೆ  ಕಂಬನಿ ಮಿಡಿದು ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅವರ ಕುಟುಂಬ ವರ್ಗಕ್ಕೆ ದುಃಖ ತಡೆದು ಕೊಳ್ಳುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಕೋರಿದ್ದಾರೆ.
ಸತ್ಯಗಣಪತಿ ತೆಪ್ಪೋತ್ಸವ ಇಂದು
ತುರುವೇಕೆರೆ: ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಸತ್ಯಗಣಪತಿಯವರ ವಿಸರ್ಜನಾ ಮಹೋತ್ಸವ ಮಂಗಳವಾರ ನಡೆಯಲಿದೆ.
ಸೋಮವಾರ ರಾತ್ರಿ ಆಸ್ಥಾನ ಮಂಟಪದಿಂದ ಗಣಪತಿಯನ್ನು  ಹೊತ್ತ ಭವ್ಯ ಮೆರವಣಿಗೆ ಪಟ್ಟಣದ ಬಹುತೇಕ ರಾಜಬೀದಿಗಳಲ್ಲಿ ಸಂಚರಿಸುವುದು. ಮೆರವಣಿಗೆ ವೇಳೆ ಹಲವಾರು ಜಾನಪದ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ. ಶಾಸಕ ಎಂ.ಟಿ.ಕೃಷ್ಣಪ್ಪ ಮಹಾ ಮಂಗಳಾರತಿ ವೇಳೆ ಹಾಜರಿದ್ದರು. ಶ್ರೀ ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್(ರಾಜು), ಕಾರ್ಯದರ್ಶಿ ನಾಗರಾಜು, ಸಹ ಕಾರ್ಯದರ್ಶಿ ನಟರಾಜು ಮೊದಲಾದವರ ತಂಡ ಇಡೀ ರಾತ್ರಿ ಮೆರವಣಿಗೆ ವೇಳೆ ಹಾಜರಿರುವರು. ಸೂಕ್ತ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
 ಮಂಗಳವಾರ ಸಾಯಂಕಾಲ ಸುಮಾರು 5 ಗಂಟೆ ವೇಳೆಗೆ ಸಂತೆ ಮೈದಾನದ ಬಳಿ ಇರುವ ಕೆರೆಯಲ್ಲಿ ಗಣಪತಿಯನ್ನು ತೆಪ್ಪದಲ್ಲಿ ಕೂರಿಸಿ ವಿಸರ್ಜನಾ ಮಹೋತ್ಸವ ನೆಡೆಯಲಿದೆ. ಈ ಬಾರಿ ಕೆರೆ ಕೋಡಿ ಬಿದ್ದಿದ್ದು ನೀರು ತುಂಬಿರುವುದರಿಂದ ತೆಪ್ಪೋತ್ಸವ ಹೆಚ್ಚು ಮೋಜು ನೀಡಲಿದೆ. ವಿಸರ್ಜನಾ ವೇಳೆ ವಿಶೇಷ ಮದ್ದಿನ ಪ್ರದರ್ಶನ ನಡೆಯಲಿದೆ. ಸಾವಿರಾರು ಮಂದಿ ವಿವಿಧ ಊರುಗಳಿಂದ ಗಣಪತಿವಿಸರ್ಜನೆಯನ್ನು ನೋಡಲು ಆಗಮಿಸುವರು.
ಇಂದು ಜಿಲ್ಲೆಗೆ ಕೇಂದ್ರ ತಂಡ
ತುಮಕೂರು: ತುಮಕೂರು ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ತಂಡವು ಮಂಗಳವಾರ ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದೆ. ತಂಡವು ತುಮಕೂರು, ಮಧುಗಿರಿ, ಶಿರಾ, ಕೊರಟಗೆರೆ ತಾಲೂಕುಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪರಿಶೀಲಿಸಲಿದೆ.
ಸಿಪಿಎಂ, ಸಿಐಟಿಯು ತೀವ್ರ ಸಂತಾಪ
ತುಮಕೂರು: ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನಿಧನಕ್ಕೆ ಸಿಪಿಎಂ, ಸಿಐಟಿಯು ಜಿಲ್ಲಾ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಜಿಎಸ್‌ಎಸ್ ದುಡಿಯುವ ಜನರ ಪರವಾಗಿಯೂ ಕಳಕಳಿಯನ್ನು ಹೊಂದಿದ್ದವರು. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಕೆ.ರಾಮಯ್ಯಗೆ ಫೆಲೋಶಿಪ್
ತಿಪಟೂರು: ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ವತಿಯಿಂದ ನಡೆದ ರಾಷ್ಟ್ರಮಟ್ಟದ ಸಾಧಕರ ಸಮಾವೇಶ ಸಮಾರಂಭದಲ್ಲಿ ತಿಪಟೂರಿನ ಹಿರಿಯ ರಂಗಭೂಮಿ ಕಲಾವಿದರು ಹಾಗೂ ಪುರಸಭಾ  ಮಾಜಿ ಸದಸ್ಯರಾದ  ಕೆ.ರಾಮಯ್ಯನವರಿಗೆ ಸಾಮಾಜಿಕ ಹಾಗೂ ಸಾರ್ವಜನಿಕರ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ 2013ರ ಡಾ.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ  ಸನ್ಮಾನಿಸಲಾಯಿತು.
ಶಿವರುದ್ರಪ್ಪಗೆ ಹಿರೇಮಠ ಶ್ರೀ ಸಂತಾಪ
ತುಮಕೂರು: ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ನಿಧನದಿಂದ ಕನ್ನಡನಾಡಿನ ಕಾವ್ಯಲೋಕದ ತಳಹದಿಯೇ ಕುಸಿದಂತಾಗಿದೆ ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ನಮ್ಮ ಕನ್ನಡನಾಡು ಕಂಡ ಅತ್ಯಂತ ಜನಪ್ರಿಯ ಮತ್ತು ಸೃಜನಾತ್ಮಕ ಕವಿ ಶಿವರುದ್ರಪ್ಪನವರು. ಅವರ ಎದೆ  ತುಂಬಿ ಹಾಡುವ ಹಾಡಿಗೆ ಇಡೀ ಕನ್ನಡನಾಡು ತಲೆದೂಗುತ್ತಿತ್ತು. ನಿಜಕ್ಕೂ ಅವರು ಕನ್ನಡನಾಡಿನ ಅಪರೂಪದ ಕವಿಕೋಗಿಲೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ. ಕೋಟಿ ಕೋಟಿ ಕನ್ನಡಿಗರನ್ನು ಅಗಲಿಹೋದ ಚೇತನಕ್ಕೆ ನಾವು ನುಡಿ-ಶ್ರದ್ಧಾಂಜಲಿಯನ್ನು ಅರ್ಪಿಸುತ್ತ ಅವರ ಕವಿಚೇತನಕ್ಕೆ ಗೌರವವನ್ನು ಅರ್ಪಿಸುತ್ತೇವೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.  
ಆಕಾಶ ವೀಕ್ಷಣೆ:    ತಿಳಿವಳಿಕೆ ಹೆಚ್ಚಾಗುತ್ತೆ
ತಿಪಟೂರು: ಹಿಂದಿನ ಕಾಲದಿಂದಲೂ ಜನರು ಆಕಾಶ ವೀಕ್ಷಣೆಯನ್ನು ಮಾಡಿ ವಿಷಯಗಳನ್ನು ರವಾನೆ ಮಾಡುತ್ತಿದ್ದರು. ನಾವಿಕರು ಆಕಾಶದಲ್ಲಿನ ಚುಕ್ಕಿಗಳು ಸಹಾಯದಿಂದ ದಿಕ್ಕುಗಳನ್ನು ಪರಿಚಯಿಸಿಕೊಂಡು ತಮ್ಮ ನೌಕಪ್ರಯಾಣ ಮಾಡುತ್ತಿದ್ದರು. ಆಕಾಶ ವೀಕ್ಷಣೆಯಂತಹ ಕಾರ್ಯಕ್ರಮಗಳಿಂದ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುವ ಮೂಲಕ ಮಕ್ಕಳಿಕೆ ಅನುಕೂಲವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ಪ್ರಭುಸ್ವಾಮಿ ತಿಳಿಸಿದರು.
ತಾಲೂಕಿನ ಬಿಸಲೇಹಳ್ಳಿಯ ಶ್ರೀಬೆಚಟ್ಟದರಾಮೇಶ್ವರ ಪ್ರೌಢಶಾಲೆಯಲ್ಲಿ ನಡೆದ ಅಕಾಶ ವೀಕ್ಷಣೆ ಕಾರ್ಯಕ್ರಮವನ್ನು ಆಕಾಶದಲ್ಲಿ ಶುಕ್ರ ನಕ್ಷತ್ರ ವೀಕ್ಷಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಮಕ್ಕಳಲ್ಲಿ ವೈಜ್ಞಾನಿಕತೆ, ಕ್ರೀಯಾಶೀಲತೆ, ಪ್ರಾಯೋಗಿಕತೆ, ನೈಜತೆ ಮತ್ತು ಸತ್ಯಸಂಧತೆಯನ್ನು ಮೂಡಿಸುವುದರ ಜೊತೆಗೆ  ನಕ್ಷತ್ರ ಮತ್ತು ಗ್ರಹಗಳ ಕುರಿತು ಮಕ್ಕಳ ಜೊತೆ ಚರ್ಚಿಸಿದರು. ಮಕ್ಕಳ ಜೊತೆಗ ಸಂವಾದ ನಡೆಸಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ ರಾತ್ರಿ 12ರವರೆಗೆ ಸಂತಸದಿಂದ ಮಕ್ಕಳಾಗಿ ಕಾರ್ಯಕ್ರಮ ವೀಕ್ಷಿಸಿದರು. ಸರಸ್ವತಿ ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ಆನಂದರಾಜು ಮಾತಾಡಿ, ದೂರದರ್ಶಕದ ಮೂಲಕ ಆಕಾಶದಲ್ಲಿನ ಚುಕ್ಕಿ, ರಾಶಿ, ನಕ್ಷತ್ರಗಳನ್ನು ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು. ಪಠ್ಯಾಧಾರಿತವಾಗಿ ಮಕ್ಕಳಿಗೆ ಪಠ್ಯಕ್ರಮದಲ್ಲಿರುವ ಪದಗಳನ್ನು ಸ್ವವಿರವಾಗಿ ಹೇಳುತ್ತಾ ಮಕ್ಕಳಲ್ಲಿರುವ ಕುತೂಹಲ ಪ್ರಶ್ನೆಗಳಿಗೆ ಉತ್ತರಿಸುವ ಅಪಾರ ಅನುಭವ, ಸರಳತೆ, ವೈಜ್ಞಾನಿಕ ನೆಲೆಗಳು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement