ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶೇಂಗಾ ಬೆಂಬೆಲೆ ಘೋಷಣೆವಿಳಂಬವಾದರೆ ಹೋರಾಟ

Vishwanath S
Updated On : 24 Dec 2013, 12:44 pm

ಪಾವಗಡ: ಶೇಂಗಾ ಬೆಳೆಗೆ ಬೆಂಬಲ ಬೆಲೆ ಘೋಷಿಸುವಲ್ಲಿ ವಿಳಂಬ ಮಾಡಿದರೆ ಉಗ್ರ ರೂಪ ಹೋರಾಟ ಅನಿವಾರ್ಯಎಂದು ಶಾಸಕ ಕೆ.ಎಂ. ತಿಮ್ಮರಾಯಪ್ಪ ಸರ್ಕಾರಕ್ಕೆ ಏಚ್ಚರಿಕೆ ನೀಡಿದರು.
ತಾಲೂಕು ಕೃಷಿ ಇಲಾಖೆ ವತಿಯಿಂದ ಸೋಮವಾರ ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ಆಯೋಜಿಸಿದ್ದ ಕೃಷಿ ಮಾಹಿತಿ ಆಂದೋಲನ ಹಾಗೂ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರು ಶೋಷಣೆ ಅನುಭವಿಸುತ್ತಿದ್ದು ಶೇಂಗಾ ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ಇಲ್ಲಿನ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ  ಈಗಾಗಲೇ ಬೆಳಕು ಚೆಲ್ಲಿ ಚರ್ಚಿಸಲಾಗಿದೆ. ಇತರೆ ಜಿಲ್ಲೆಗಳಲ್ಲಿನ ರೈತರು ಬೆಳೆದ ಕಬ್ಬು, ಈರುಳ್ಳಿ, ತೆಂಗು ಬೆಳೆಗಳಿಗೆ ನೀಡಿದಂತಹ ಬೆಂಬಲ ಬೆಲೆ ಇಲ್ಲಿನ ರೈತರ ಜೀವನಾಡಿ ಶೇಂಗಾ ಬೆಳೆಗೂ ನೀಡಿ ರೈತರ ಜೀವ ಉಳಿಸಬೇಕಿದೆ ಎಂದು ಸರ್ಕಾರಕ್ಕೆ ಅವರು ಆಗ್ರಹಿಸಿದರು.
ಶ್ಲಾಘನೀಯ: ಕಲ್ಟಿವೇಷನ್, ರಸಗೊಬ್ಬರ, ಕೂಲಿ ಸೇರಿದಂತೆ ಇತರೆ ಕೃಷಿ ಉತ್ಪಾದನೆ ವೆಚ್ಚಗಳು ಹೆಚ್ಚಾಗುವುದರಿಂದ ಲಾಭಕ್ಕಿಂತ ಶೇಂಗಾ ಬೆಳೆಗಾರರಿಗೆ ನಷ್ಟವೇ ಹೆಚ್ಚಾದ ಕಾರಣ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು. ಸರ್ಕಾರದ ಅನುಕೂಲ ಪಡೆಯಬೇಕಾದರೆ ರೈತರು ಸಂಘಟಿತರಾಗಬೇಕು. ಇಲ್ಲಿನ ರೈತ ಪರ ಸಂಘಗಳು ಕ್ರಿಯಾ ಶೀಲವಾಗಿದ್ದು ರೈತರ ಸಮಸ್ಯೆಗಳ ಹಿನ್ನಲೆಯಲ್ಲಿ ನಿರಂತರ ಹೋರಾಟ ಮಾಡುತ್ತಿರುವುದು ಶ್ಲಾಘನೀಯವೆಂದರು. ಇಲ್ಲಿನ ರೈತರ ಸಮಸ್ಯೆಗಳ ಕೂಗು ಪಾರ್ಲಿಮೆಂಟ್ ಹಾಗೂ ವಿಧಾನ ಸೌಧ ಮುಟ್ಟಬೇಕಾದರೆ ಹೋರಾಟ ಅನಿವಾರ್ಯವಾಗಿದ್ದು  ರೈತ ಪರ ಹೋರಾಟಕ್ಕೆ ಅಣಿಯಾಗುವಂತೆ ಪ್ರಗತಿ ಪರ ರೈತ ಸಂಘಗಳಿಗೆ ಅವರು ಕರೆಯಿತ್ತರು.
ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಬೆಳೆ ಬೆಳೆಯುವ ಹಿನ್ನಲೆಯಲ್ಲಿ ರೈತರ ಶ್ರಯೋಭಿವೃದ್ಧಿಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ವತಿಯಿಂದ ಟಿಎಸ್‌ಪಿ ಹಾಗೂ ಎಸ್‌ಸಿಪಿ ಯೋಜನೆ ಅಡಿಯಲ್ಲಿ ಸಾಮಗ್ರಿಗಳನ್ನು ಒದಗಿಸಲು ಸರ್ಕಾರದಲ್ಲಿ ಈಗಾಗಲೇ ಚರ್ಚಿಸಿದ್ದು, ಅತಿ ಶೀಘ್ರ ಕೃಷಿ ಸಾಮಗ್ರಿಗಳನ್ನು ವಿತರಿಸುವ ಭರವಸೆ ವ್ಯಕ್ತಪಡಿಸಿದರು. ರೈತರ ಸಮಸ್ಯೆ ನಿವಾರಣೆ ಹಾಗೂ ರೈತರ ಕೃಷಿ ಉತ್ಪನ್ನಗಳ ಮಾರಾಟ ಸೇರಿದಂತೆ ಸರ್ಕಾರದ ಬೆಂಬಲ ಬೆಲೆ ಕಲ್ಪಿಸುವ ಹಿನ್ನಲೆಯಲ್ಲಿ ರೈತ ಸಂಘಟಿತರೊಂದಿಗೆ ಚರ್ಚಿಸಿ ಕೃಷಿ ಖರೀದಿ ಕೇಂದ್ರಗಳನ್ನು  ತೆರೆಯುವುದಾಗಿ ಅವರು ತಿಳಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎನ್. ತಿಮ್ಮಾರೆಡ್ಡಿ, ಜಿಪಂ ಸದಸ್ಯ ಆರ್.ಸಿ. ಅಂಜಿನಪ್ಪ, ತಾಪಂ ಸದಸ್ಯ ಚಂದ್ರಶೇಖರ್, ರೈತ ಸಂಘದ ವಿ. ನಾಗಭೂಷಣ್ ರೆಡ್ಡಿ, ಕೃಷ್ಣರಾವ್ ಮುಂತಾದವರು ರೈತ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಮುಖಂಡರಾದ ಬಲರಾಮರೆಡ್ಡಿ, ಪ್ರಸಾದ್ ರೆಡ್ಡಿ, ವಿ. ಚಿಂತಲರೆಡ್ಡಿ ಹಾಗೂ ತಾಪಂ ಅಧ್ಯಕ್ಷೆ ರಾಧ ರಾಜ್‌ಗೋಪಾಲ್, ಉಪಾಧ್ಯಕ್ಷೆ ಪಾರ್ವತಮ್ಮ, ತಾಪಂ ಸದಸ್ಯೆ ವಿನೋದ ರಾಮಾಂಜಿನಪ್ಪ, ತಾಪಂ ಇಒ ತಿಪ್ಪೇಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪುರುಷೋತಮ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವರಾಯಪ್ಪ ಜಲಾನಯನ ಪುಟ್ಟರಂಗಪ್ಪ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement