27 ರಂದು ಜಿ.ಎಸ್. ಶಿವರುದ್ರಪ್ಪಗೆ ಶ್ರದ್ಧಾಂಜಲಿ
ಪಾವಗಡ: ಕನ್ನಡ ನಾಡು ಕಂಡು ಶ್ರೇಷ್ಠ ಕವಿ ಜಿ.ಎಸ್.ಶಿವರುದ್ರಪ್ಪ ನಿಧನರಾದ ಹಿನ್ನಲೆಯಲ್ಲಿ ತಾಲೂಕು ದ.ರಾ.ಬೇಂದ್ರ ಪ್ರಗತಿ ಪರ ಸಾಂಸ್ಕೃತಿಕ ವೇದಿಕೆ ವತಿಯಿಂದ ಡಿ.27ರಂದು ಬೆಳಿಗ್ಗೆ 11ಗಂಟೆಗೆ ರಂಗಸಮುದ್ರ ಗ್ರಾಮದ ಕಸ್ತೂರಭಾ ಶಾಲೆಯಲ್ಲಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಂಡಿರುವುದಾಗಿ ನಲಸಿರಿ ಜಯರಾಮ್ ತಿಳಿಸಿದ್ದಾರೆ.
ಸಭೆಗೆ ಸಾಹಿತಿಗಳಾದ ಪಶು ಸಂಗೋಪನೆ ಇಲಾಖೆಯ ಸಂಜೀವರಾಯಪ್ಪ, ಪುಟ್ಟರಂಗಪ್ಪ, ಕಸಾಪ ಮಾಜಿ ಅಧ್ಯಕ್ಷ ಸಣ್ಣನಾಗಪ್ಪ, ಸಂಘ ಸಂಸ್ಥೆಗಳ ಪ್ರತಿನಿಧಿ ಆರ್.ಟಿ.ಖಾನ್, ಪತ್ರಕರ್ತ ಜೆ.ನಾಗೇಂದ್ರ, ಶಾಲೆಯ ಮುಖ್ಯೋಪಾಧ್ಯಾಯ ದೊಡ್ಡಲಿಂಗಪ್ಪ, ವಳ್ಳೂರು ನಾಗೇಶ್, ಚನ್ನಸಾಗರ ಮಲ್ಲೇಶ್, ನಿಲಯ ಪಾಲಕ ಶಿವಪ್ಪ ವಿಮೋಚನೆ ಸೇನೆ ವಿರಪಸಮುದ್ರ ರಾಮಾಂಜಿನೇಯ, ಹನುಮಂತನಹಳ್ಳಿ ರಮೇಶ್ ಮುಂತಾದವರು ಭಾಗವಹಿಸಿ ಜಿ.ಎಸ್.ಶಿವರುದ್ರಪ್ಪ ಅವರ ಕುರಿತು ಮಾತನಾಡಲಿದ್ದಾರೆ.