ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ನರೇಂದ್ರ, ಜಗದೀಶ್ ಗೆಲವಿಗೆ ಪ್ರಾಮಾಣಿಕ ಯತ್ನ ಮಾಡಿ'

Rashmi Kasaragodu
Updated On : 25 Dec 2013, 2:03 am

ಕ,ಪ್ರ,ವಾರ್ತೆ ಮಧುಗಿರಿ ಡಿ. 24
ರಾಜ್ಯ ಒಕ್ಕಲಿಗರ ಸಂಘಕ್ಕೆ ನಿರ್ದೇಶಕರ ಆಯ್ಕೆ ಮಾಡಲು ತುಮಕೂರು ಜಿಲ್ಲೆಯಿಂದ 2 ಸ್ಥಾನಗಳಿಗೆ ಜ.5ರಂದು ಚುನಾವಣೆ ನಡೆಯಲಿದ್ದು, ತಾಲೂಕಿನ ಸಮುದಾಯದ ಮತದಾರರು ಯಾವುದೇ  ಆಸೆ, ಆಮಿಷಗಳಿಗೆ ಬಲಿಯಾಗದೇ ಅಭ್ಯರ್ಥಿಗಳಾದ ನರೇಂದ್ರ ಬಾಬು ಮತ್ತು ಜಗದೀಶ್ ಅವರ ಗೆಲವಿಗೆ ಪ್ರಾಮಾಣಿಕವಾಗಿ ಶ್ರಮಿಸುವಂತೆ ನಿವೃತ್ತ ಐಎಎಸ್ ಅಧಿಕಾರಿ ಎಂ.ವಿ.ವೀರಭದ್ರಯ್ಯ ಮತದಾರರಿಗೆ ಕರೆ ನೀಡಿದರು.
ಪಟ್ಟಣ ಸಿಪಿಸಿ ಸಭಾಂಗಣದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಚುನಾವಣೆ ಏಲ್ಲೋ ಒಂದು ಕಡೆ ಕಬ್ಬಿಣದ ಕಡಲೆಯಾಗಿದ್ದು, ಪ್ರಜ್ಞಾವಂತ ಮತದಾರ ಬಂಧುಗಳು ಯಾವುದೇ ರೀತಿಯ ಆಸೆ, ಆಮಿಷಗಳಿಗೆ ಬಲಿಯಾಗದೆ   ಯುವ ಚೇತನಗಳನ್ನು ಬೆಂಬಲಿಸುವ ಮೂಲಕ ರಾಜ್ಯ ಸಂಘದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸುಲಭವಾಗಲಿದೆ ಎಂದರು.
ನರೇಂದ್ರಬಾಬು ಯುವ ನಾಯಕ,  ಸ್ಥಳೀಯ ಅಭ್ಯರ್ಥಿ  ಕೂಡ. ತಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡುವ ಮೂಲಕ ಅವರಿಗೆ ಮತ ಹಾಕಿ. ಅದೇ ರೀತಿ ಜಗದೀಶ್ ಕೂಡ ಈ ಹಿಂದೆ ನಿರ್ದೇಶಕರಾಗಿ ಸೇವೆ ಸಲ್ಲಿಸುವ ಮುಖೇನ ಮಧುಗಿರಿ ತಾಲೂಕಿನ ಸಂಘಕ್ಕೆ ಸಾಕಷ್ಟು ಕೆಲಸ ಕಾರ್ಯ ಮಾಡಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement