ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಧುಗಿರಿಗೆ ಭೇಟಿ, ಪರಿಶೀಲನೆ

Rashmi Kasaragodu
Updated On : 25 Dec 2013, 2:04 am

ಕನ್ನಡಪ್ರಭ ವಾರ್ತೆ   ಮಧುಗಿರಿ   ಡಿ.24
ತಾಲೂಕಿನಲ್ಲಿ ಹತ್ತಾರು ವರ್ಷ ಸಕಾಲದಲ್ಲಿ ಮಳೆ ಬಾರದೇ ಬಿತ್ತಿದ ಆರ್ಥಿಕ  ಬೆಳೆಗಳಾದ ಶೇಂಗಾ, ಮುಸುಕಿನ ಜೋಳ, ತೊಗರಿ, ರಾಗಿ   ಬೆಳೆಗಳು  ಕೈಗೆ ಸಿಗದೇ ಆರ್ಥಿಕ ನಷ್ಟ ಸಂಭವಿಸಿದೆ ಎಂದು ಮಧುಗಿರಿ ತಾಲೂಕಿನ ವಿವಿಧ ಬರಪೀಡಿತ ಪ್ರದೇಶಗಳಿಗೆ  ಮಂಗಳವಾರ ಭೇಟಿ ನೀಡಿದ   ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಾರ್ವಜನಿಕರು ತಿಳಿಸಿದರು. ಪ್ರತಿ ವರ್ಷ ನಮಗೆ ಅನಾವೃಷ್ಟಿ ತಪ್ಪಿದ್ದಲ್ಲ. ಯಾವುದೇ ಬೆಳೆ ಬೆಳೆಯಲು ಖರ್ಚು ಮಾಡಿದ ಹಣ ಕೂಡ ನಮಗೆ ಸಿಗುವುದಿಲ್ಲ. ಬರಗಾಲ ಎದುರಿಸಲು ಶಾಶ್ವತ ಯೋಜನೆ ರೂಪಿಸಿ. ಈಗ  ಸಂಪೂರ್ಣ ಬೆಳೆ ನಾಶವಾಗಿರುವ ಹಿನ್ನಲೆಯಲ್ಲಿ ಸೂಕ್ತ ಪರಿಹಾರ ಒದಗಿಸಿ ಕೊಡುವಂತೆ  ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳಲ್ಲಿ ರೈತರು ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement