ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಆರ್ಥಿಕವಾಗಿ ಸದೃಢರಾಗಲು ರೇಷ್ಮೆ ಬೆಳೆ ಸಹಕಾರಿ

Mainashree
Updated On : 25 Dec 2013, 10:27 am

ಮಧುಗಿರಿ: ಉತ್ತಮ ಗುಣ ಮಟ್ಟದ ಹಿಪ್ಪು ನೇರಳೆ ಸೊಪ್ಪು ಮತ್ತು ರೇಷ್ಮೆ ಗೂಡಿನ ಉತ್ಪಾದನೆ ಹೆಚ್ಚಿಸಿ ಆರ್ಥಿಕವಾಗಿ ಸದೃಢರಾಗಲು ರೇಷ್ಮೆ ಬೆಳೆ ರೈತರಿಗೆ ಸಹಕಾರಿ ಎಂದು ವಿಜ್ಞಾನಿ ವೇದವ್ಯಾಸ್ ಮೈಸೂರು ತಿಳಿಸಿದರು.
ಮಧುಗಿರಿ ಕಸಬಾ ಕೆ.ಬಸವನಹಳ್ಳಿಯಲ್ಲಿ ತಾಂತ್ರಿಕ ಸೇವಾ ಕೇಂದ್ರ ರೇಷ್ಮೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ರೇಷ್ಮೆ ಕ್ಷೇತ್ರೋತ್ಸವ ಆಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರೇಷ್ಮೆ ಉತ್ಪಾದನೆಯಲ್ಲಿ ಕನಾಟಕ ರಾಜ್ಯ ಅಗ್ರ ಸ್ಥಾನದಲ್ಲಿದ್ದು, ರೇಷ್ಮೆ ಕೃಷಿಯು  ರೈತರು ಕಡಿಮೆ ವೆಚ್ಚದಲ್ಲಿ ಅಧಿಕ ಆದಾಯ, ನಿರಂತರ ಉದ್ಯೋಗ ಕಲ್ಪಿಸಿ ವರಮಾನ ಹೆಚ್ಚಿಸುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಭಾಗ್ಯಮ್ಮ ಕಾರ್ಯಕ್ರಮ ಉದ್ಘಾಟಿಸಿದರು.
ರೇಷ್ಮೆ ವಿಸ್ತರಣಾಧಿಕಾರಿ ಟಿ.ಲಕ್ಷ್ಮೀನರಸಯ್ಯ, ಶಾಂತರಾಜು, ರಂಗಮ್ಮ, ಗ್ರಾಮ ಪಂಚಾಯಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ನಾಗರಾಜು ಪ್ರಾರ್ಥಿಸಿದರು. ರೇಷ್ಮೆ ನಿರೀಕ್ಷಕ ಈಶ್ವರಚಾರ್ ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement