ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೊರಟಗೆರೆಗೆ ಕೇಂದ್ರ ತಂಡದ ಭೇಟಿ

Mainashree
Updated On : 25 Dec 2013, 10:27 am

ಕೊರಟಗೆರೆ: ತಾಲೂಕು ಭೀಕರ ಬರಗಾಲದಿಂದ ತತ್ತರಿಸಿದೆ.  ಬಹುತೇಕ ಅಂತರ್ಜಲ ಮಟ್ಟ ಕುಸಿದಿದ್ದು ರೈತರು ಬರಗಾಲದಿಂದ ಬಳಲುತ್ತಿದ್ದಾರೆ ಎಂದು ಶಾಸಕ ಪಿ.ಆರ್. ಸುಧಾಕರ್ ಲಾಲ್ ಕೇಂದ್ರದ ಬರಗಾಲದ ನಿಯೋಗಕ್ಕೆ ತಿಳಿಸಿದರು.
ಅವರು ಕೇಂದ್ರ ತಂಡ ತಾಲೂಕಿನ ಜಂಪೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿ ಕ್ಷೇತ್ರದ ರೈತರು ಸ್ಥಿತಿಯನ್ನು ವಿವರಿಸಿದರು.
ಕೇಂದ್ರ ನಿಯೋಗ ತಂಡದ ಸಿನ್ಹಾ ರೈತರಿಂದ ಸಮಸ್ಯೆಗಳ ಆಲಿಸಿದರು. ಒಂದು ಸಾವಿರ ಅಡಿಯವರೆಗೂ ಕೊಳವೆ ಬಾವಿಯನ್ನು ಕೊರೆದರೂ ನೀರು ಸಿಗದ ಸ್ಥಿತಿಯಲ್ಲಿ ಕೊರಟಗೆರೆ ರೈತರು ಇದ್ದು ಸಮಸ್ಯೆಗೆ ಪರಿಹಾರ ಬೇಕು. ಕೇಂದ್ರ ಸರ್ಕಾರಕ್ಕೆ ತಾಲೂಕಿನ ವರದಿಯನ್ನು ಸಮರ್ಪಕವಾಗಿ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಸ್. ಬಸವರಾಜು, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ ಜಯಚಂದ್ರ, ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್, ಜಿಲ್ಲಾಧಿಕಾರಿ ಸತ್ಯಮೂರ್ತಿ, ತಹಸೀಲ್ದಾರ್ ಡಿ.ಕೆ. ರಾಮಚಂದ್ರಪ್ಪ, ತಾ.ಪಂ ಸದಸ್ಯರಾದ ಬಸವರಾಜು, ರವಿಕುಮಾರ್, ಜಿ.ಎಲ್. ಹನುಮಂತರಾಯಪ್ಪ, ಮುಖಂಡರಾದ ಮಹಾಲಿಂಗಪ್ಪ, ಎಲ್. ರಾಜಣ್ಣ ನೂರಾರು ರೈತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement