ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಭಾವಪೂರ್ಣ ಶ್ರದ್ಧಾಂಜಲಿ

Mainashree
Updated On : 25 Dec 2013, 10:27 am

ತಿಪಟೂರು: ಧೀಮಂತ ಕವಿ ಜಿ.ಎಸ್.ಶಿವರುದ್ರಪ್ಪ ಎಂದು ಎಸ್.ವಿ.ಪಿ.ಕಾಲೇಜಿನ ಕನ್ನಡ ಉಪನ್ಯಾಸಕ ಕೆ.ಎನ್.ರೇಣುಕಯ್ಯ ಬಣ್ಣಿಸಿದರು.
ಪಟ್ಟಣದ ಎಸ್.ವಿ.ಪಿ.ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಜಿ.ಎಸ್.ಎಸ್. ಅವರ ಭಾವಪೂರ್ಣ ಶ್ರದ್ಧಾಂಜಲಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಅವರ ನೆಚ್ಚಿನ ಶಿಷ್ಯರಾದ ಜಿ.ಎಸ್.ಎಸ್ ಅವರು ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಯಲ್ಲಿ ಪಳಗಿ ಭಾರತೀಯ ಮತ್ತು ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆಯಲ್ಲಿ ಸೌಂದರ್ಯ ಸಮೀಕ್ಷೆ ನಡೆಸಿ ಕಾವ್ಯಾರ್ಥಚಿಂತನದೊಂದಿಗೆ ನವೋಲ್ಲಾಸ ಪ್ರತಿಭೆಯನ್ನು ಹೊರಹೊಮ್ಮಿದರು. ನೀಲಾಕಾಶವ ಆವರಿಸಿ ಎದೆತುಂಬಿ ಹಾಡುತ್ತಾ ಕಲ್ಲು ಮಣ್ಣುಗಳ ಗುಡಿಯೊಳಗಿರುವ ದೇವರ ಹುಡುಕದೆ ಅಂತರಂಗದೊಳಗಿರುವ ಪ್ರೀತಿ ಸ್ನೇಹಗಳ ಬೆಸೆಯಿರಿ ಎಂಬ ಭಾವಗೀತೆಯ ಬುಗ್ಗೆಯನ್ನು ಚಿಮ್ಮಿಸಿ ರಾಷ್ಟ್ರಕವಿ ಎನಿಸಿಕೊಂಡರು ಎಂದರು.
ಪ್ರಭಾರಿ ಪ್ರಾಂಶುಪಾಲ ಜಿ. ಕುಮಾರಯ್ಯ, ಮುಖ್ಯ ಶಿಕ್ಷಕರಾದ ಹಾಲಪ್ಪ ಎಚ್.ಕೆ.ಪದ್ಮಾಕ್ಷಮ್ಮ, ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳೆಲ್ಲರೂ ಎರಡು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement