ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಾರ್ವಜನಿಕ ಪ್ರದೇಶ ಒತ್ತುವರಿಗೆ ಆಕ್ರೋಶ

Mainashree
Updated On : 25 Dec 2013, 10:27 am

ಕ.ಪ್ರ.ವಾರ್ತೆ  ಕುಣಿಗಲ್ಣ್ ಡಿ.25
ಸಾರ್ವಜನಿಕ ಪ್ರದೇಶ ಒತ್ತುವರಿಯಾಗುತ್ತಿದ್ದರೂ ಪುರಸಭಾಡಳಿತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವುದನ್ನು ಖಂಡಿಸಿ, ತಾಲೂಕು ಆಡಳಿತ ಶೀಘ್ರ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ, 13ನೇ ವಾರ್ಡ್ ನಾಗರಿಕರು ಬುಧವಾರ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಪುರಸಭೆ ವಾಪ್ತಿಯ13 ನೇವಾರ್ಡ್‌ನ ಮಹಾವೀರನಗರದಲ್ಲಿ ಖಾತೆದಾರರೊಬ್ಬರು, ಪಕ್ಕದ ಸಾರ್ವಜನಿಕ ರಸ್ತೆ ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ನಿರ್ಮಾಣ ಅಕ್ರಮವೆಂದು ನಾಗರಿಕರೊಬ್ಬರು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣದಾಖಲಿಸಿದ ಮೇರೆಗೆ, ತಡೆಯಾಜ್ಞೆ ನೀಡಿದೆ. ಬುಧವಾರ ಕ್ರಿಸ್‌ಮಸ್ ಪ್ರಯುಕ್ತ ಸರ್ಕಾರಿ ರಜೆ ದಿನವಾದ ಕಾರಣ ಕಟ್ಟಡ ಮಾಲೀಕರು, ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ನಾಗರಿಕರನ್ನು ಕೆರಳಿಸಿತು. ನಾಗರಿಕರು ಈ ನಿಟ್ಟಿನಲ್ಲಿ ಪುರಸಭಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳನ್ನು ಸಂಪರ್ಕಿಸಿ, ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದ್ದರೂ ಯಾವುದೇ ಅಧಿಕಾರಿಗಳು ಸ್ಪಂದಿಸದ ಕಾರಣ ಬೇಸತ್ತ ನಾಗರಿಕರು ಪ್ರತಿಭಟನೆಗೆ ಮುಂದಾದರು.
ಮುಖಂಡರಾದ ಶಿವಣ್ಣ, ಅಶ್ವತ್ಥರಂಗ ನೇತೃತ್ವದಲ್ಲಿ ಪುರಸಭೆಗೆ ಆಗಮಿಸಿ, ಸಾರ್ವಜನಿಕಪ್ರದೇಶ ಸಂರಕ್ಷಿಸು ವಲ್ಲಿ ವಿಫಲರಾದ ಮುಖ್ಯಾಧಿಕಾರಿ, ಪುರಸಭೆ ಆಡಳಿತಾಧಿಕಾರಿಯಾದ ಉಪವಿಭಾಗಾಧಿಕಾರಿಗಳು, ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಆಗ್ರಹ: ಪ್ರತಿಭಟನನಕಾರರನ್ನುದ್ದೇಶಿಸಿ ಮಾತನಾಡಿದ ಶಿವಣ್ಣ, ಪುರಸಭೆವ್ಯಾಪ್ತಿಯಲ್ಲಿ ಹಲವು ಸಾರ್ವಜನಿಕ ಪ್ರದೇಶಗಳಾದ ರಸ್ತೆ, ಪಾರ್ಕ್, ಪುರಸಭೆ ಜಾಗಗಳನ್ನು, ಪುರಸಭೆ ಸಿಬ್ಬಂದಿ ಅಕ್ರಮವಾಗಿ ಖಾತೆ ಮಾಡುತ್ತಿದ್ದಾರೆ. ಉಪವಿಭಾಗಾಧಿಕಾರಿಗಳು ಆಡಳಿತಾಧಿಕಾರಿಯಾಗಿದ್ದು, ಅವರು ಕಂಡೂಕಾಣದಂತೆ ಸುಮ್ಮನಿರುವುದು ಹಲವು
ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಾರ್ವಜನಿಕ ಪ್ರದೇಶ ಸಂರಕ್ಷಣೆ ನಿಟ್ಟಿನಲ್ಲಿ ಪುರಸಭೆ ಆಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತ ಕೂಡಲೆ ಮಧ್ಯಪ್ರವೇಶಿಸಿ ಅಕ್ರಮ ಕಟ್ಟಡ ನಿರ್ಮಾಣ ನಿಲ್ಲಿಸಿ, ಪುರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕ ಪ್ರದೇಶ ಸಂರಕ್ಷಿಸಬೇಕೆಂದು ಆಗ್ರಹಿಸಿದರು.
 ನಾಗರಿಕರ ಪ್ರತಿಭಟನೆ ವಿಶಯ ತಿಳಿದ ಮುಖ್ಯಾಧಿಕಾರಿ ಅನ್ನದಾನಿ ದೂರವಾಣಿ ಮೂಲಕ ಪ್ರತಿಭಟನಕಾರರನ್ನು ಸಂಪರ್ಕಿಸಿ, ಸಾರ್ವಜನಿಕ ಪ್ರದೇಶದ ಕಟ್ಟಡ ನಿರ್ಮಾಣವನ್ನು ನಿಲ್ಲಿಸುವಂತೆ ಸೂಚಿಸಿದ್ದು, ಗುರುವಾರ ಆಗಮಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ಪಾರ್ಥ, ಶಿವಣ್ಣ, ಎಲ್ಲಪ್ಪ, ಜಯಮ್ಮ, ಲಕ್ಷ್ಮೀದೇವಮ್ಮ, ವೆಂಕಟಮ್ಮ, ಭೈರಪ್ಪ, ಉಮೇಶ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement