ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹೊಸ ರುಚಿ, ಅಭಿರುಚಿ ಬೆಳೆಸಿದವರು ಜಿಎಸ್ಸೆಸ್

Mainashree
Updated On : 25 Dec 2013, 10:27 am

ತುಮಕೂರು: ಎಸ್ಸೆಸ್, ಕವಿಯಾಗಿ, ಕಾವ್ಯ ಮೀಮಾಂಸಕರಾಗಿ, ಅಧ್ಯಾಪಕರಾಗಿ ಹಾಗೂ ಸಾಹಿತ್ಯ ಆಡಳಿತಗಾರರಾಗಿ  ಕನ್ನಡಿಗರಲ್ಲಿ ಸಾಹಿತ್ಯ , ಸಂಸ್ಕೃತಿಗಳ ಹೊಸ ರುಚಿ, ಅಭಿರುಚಿಗಳನ್ನು ಬೆಳೆಸಿದವರು ಎಂದು ಸೂಫ್ಹಾ  ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ. ಇಂತಿಯಾಜ್ ಅಹಮದ್ ಅಭಿಪ್ರಾಯಪಟ್ಟರು.
ಗೂಳೂರಿನ ವಿದ್ಯಾ ಸಂಸ್ಥೆಯಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನಿಧನದ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂತಾಪ ಅರ್ಪಿಸಿ  ಮಾತನಾಡಿದ ಅವರು ಜಿ.ಎಸ್. ಶಿವರುದ್ರಪ್ಪನವರು ಪಂಪ ಪ್ರಶಸ್ತಿ ವಿಜೇತರು. ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಎಂದರು.
ಸುಮಾರು ಐದೂವರೆ ದಶಕಗಳಿಂದ ಕಾವ್ಯ ಕೃಷಿ ಮಾಡುತ್ತಿರುವ ಶಿವರುದ್ರಪ್ಪ, ಕವಿ ಮಾತ್ರವಲ್ಲ, ಬರಹಗಾರ, ವಿಮರ್ಶಕ, ವಿಶ್ಲೇಷಕ ಹಾಗೂ ನವೋದಯ ಮತ್ತು ನವ್ಯ ಪ್ರಕಾರಗಳೆರಡರಲ್ಲೂ ಕಾವ್ಯ ರಚನೆ ಮಾಡಿರುವ ಮಹಾನ್ ಕವಿಯಾಗಿದ್ದರು ಎಂದು ಹೇಳಿದರು.
ಡಾ.ಜಿ.ಎಸ್. ಶಿವರುದ್ರಪ್ಪನವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು. ಜಿಎಸ್‌ಎಸ್ ಅವರ ಕಾವ್ಯ ಕವಿತೆಯಾಗಿ ಕನ್ನಡಿಗರ ಮನಸ್ಸಿನಲ್ಲಿ ಮನೆಮಾತಾಗುವಂತೆ ಮಾಡಿದೆ. ಕರ್ನಾಟಕದ ನೆಲ, ಜಲ, ಭಾಷೆ ಮೇಲೆ ಕವಿತೆಯನ್ನು ರಚಿಸಿರುವ ಜಿಎಸ್‌ಎಸ್ ಅವರನ್ನು ನಾವೆಂದು ಮರೆಯುವಂತಿಲ್ಲ ಎಂದರು.
 ಡಾ. ಈಶ್ವರರೆಡ್ಡಿ, ಗೂಳೂರಿನ ಯುವ ಮುಖಂಡ ಹನುಮೇಶ್, ಗೋವರ್ಧನ್, ಪ್ರಾಧ್ಯಾಪಕಿ ಫೀರ್ ದೊಸ್, ಫಹಿಮಾಭಾನು, ಕಾಂತರಾಜು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement