30ರಂದು ಯುವ ಸಂಸತ್ ಸ್ಪರ್ಧೆ
ರಾಮನಗರ: ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 2013-14ನೇ ಸಾಲಿನ ಯುವ ಸಂಸತ್ ಸ್ಪರ್ಧೆಯು ಡಿ.30ರ ಬೆಳಗ್ಗೆ 9.30ಕ್ಕೆ ನಗರದ ಗುರುಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಡಿ. ಲಿಂಗರಾಜು ಉದ್ಘಾಟಿಸುವರು. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಪದನಿಮಿತ್ತ ಉಪ ಕಾರ್ಯದರ್ಶಿ ಬಿ.ಜಿ. ಶ್ಯಾಮಲ ಅಧ್ಯಕ್ಷತೆ ವಹಿಸುವರು.