ಅಟಲ್ ಹುಟ್ಟುಹಬ್ಬದಂದು ರಕ್ತದಾನ
ತಿಪಟೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಹುಟ್ಟು ಹಬ್ಬದ ಪ್ರಯುಕ್ತ ತಾಲೂಕು ಬಿಜೆಪಿ ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ರಕ್ತಾದಾನ ಶಿಬಿರ ಏರ್ಪಡಿಸಿತ್ತು. 100ಸಾರ್ವಜನಿಕರು ರಕ್ತದಾನ ಮಾಡಿದರು. ಮಾಜಿ ಶಾಸಕ ಬಿ.ಸಿ. ನಾಗೇಶ್, ತಾಲೂಕು ಅಧ್ಯಕ್ಷ ಎಚ್.ಎನ್. ಗಂಗಾಧರ್, ನಗರಾಧ್ಯಕ್ಷ ಮಂಜುನಾಥ್, ಮುಖಂಡರಾದ ಬಿಸಲೇಹಳ್ಳಿ ಜಗದೀಶ್, ಶಂಕರಪ್ಪ, ಮಂಜುನಾಥ್, ವೈದ್ಯರಾದ ಶ್ರೀಧರ್, ಪ್ರಹ್ಲಾದ್, ಗಂಗಾಮಣಿ ಮತ್ತಿತರರಿದ್ದರು