ಆಟೋ ಪರ್ಮಿಟ್ ನೀಡಲು ಮನವಿ
ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕು ಕಡಬಾ ಹೋಬಳಿ ವ್ಯಾಪ್ತಿಗೆ ಆಟೋ ಪರ್ಮಿಟ್ ನೀಡಲು ಒತ್ತಾಯಿಸಿ ಜಯ ಕರ್ನಾಟಕ ಜಿಲ್ಲಾ ಆಟೋ ಘಟಕವು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಮನವಿ ಸಲ್ಲಿಸಿತು ಜಯ ಕರ್ನಾಟಕ ಆಟೋ ಘಟಕದ ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ನೇತೃತ್ವದಲ್ಲಿ ಸಂಘಟಿತರಾದ ಕಡಬಾ ಹೋಬಳಿಯ ನೂರಾರು ಆಟೋ ಚಾಲಕರು ಕಡಬಾ ಹೋಬಳಿ ವ್ಯಾಪಿಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಆಟೋಗಳಿಗೆ ಪರ್ಮೀಟ್ ನೀಡಿ ಆಟೋ ಚಾಲಕರ ಜೀವನ ಸುಧಾರಣೆಗೆ ಸಹಕರಿಸುವಂತೆ ಮನವಿ ಮಾಡಿದರು. ಮನವಿ ಪತ್ರ ಸ್ವೀಕರಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಬಗ್ಗೆ ಸಂಬಂದಪಟ್ಟ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಕೆಜೆಪಿ ಮುಖಂಡ ಟಿ.ಆರ್. ಸದಾಶಿವಯ್ಯ, ಜಾಕಿರ್ ಹುಸೇನ್, ಗಿರಿಯಪ್ಪ ಹಾಗು ಆಟೋ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.