ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಆಧುನಿಕ ಜೀವನ ಶೈಲಿಯಿಂದ ಕುಟುಂಬಗಳಲ್ಲಿ ನೆಮ್ಮದಿ ಕಣ್ಮರೆ

Rashmi Kasaragodu
Updated On : 27 Dec 2013, 1:56 am


ಹುಳಿಯಾರು: ದಿನಗಳು ಉರುಳುತ್ತಿರುವಂತೆ ಮಾನವ ತನ್ನ ಜೀವನ ಶೈಲಿಯಲ್ಲಿ  ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿರುವುದಲ್ಲದೆ, ನಮ್ಮ ಪೂರ್ವಜರು ಹಾಕಿಕೊಟ್ಟ ಜೀವನ ಹಾಗೂ ಕುಟುಂಬ ನಿರ್ವಹಣೆಯ ರೀತಿ ನೀತಿಗಳನ್ನು ಗಾಳಿಗೆ ತೂರಿ ಸಾಗುತ್ತಿರುವುದರಿಂದ ಕುಟುಂಬಗಳಲ್ಲಿ ಶಾಂತಿ, ನೆಮ್ಮದಿಯಿಲ್ಲದೆ ನಿತ್ಯ ಸಂಕಷ್ಟದ ಬದುಕನ್ನು ಎದುರಿಸುತ್ತಿದ್ದಾರೆಂದು  ಆರ್ಎಸ್ಎಸ್ ಸಂಘದ ಹಿರಿಯ ಪ್ರಚಾರಕ ಮತ್ತು ಕುಟುಂಬ  ಪ್ರಬೋಧನ್ ಪ್ರಮುಖ್ ಆದ ಸು.ರಾಮಣ್ಣ ವಿಷಾದಿಸಿದರು.
ಹುಳಿಯಾರಿನ ಶ್ರೀಸೀತಾರಾಮ ಕಲ್ಯಾಣಮಂದಿರದಲ್ಲಿ  ಪ್ರಸ್ತುತ ಕುಟುಂಬ ವ್ಯವಸ್ಥೆ ಕುರಿತಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಯೋಜಿಸಿದ್ದ  ಕುಟುಂಬಕ್ಕಾಗಿ ನಾವು-ನೀವು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಸಂಸ್ಕಾರ, ಪದ್ಧತಿ, ಪರಂಪರೆಗಳ ಆಗರವಾಗಿದ್ದ  ಹಿಂದಿನ ಕಾಲದ ಕುಟುಂಬ ಪದ್ಧತಿಯಲ್ಲಿ ಗಂಡ-ಹೆಂಡತಿ, ಮಕ್ಕಳು ಸೇರಿದಂತೆ ಕುಟುಂಬ ಸಂಬಂಧಗಳು  ಯಾವ ರೀತಿ ಪೂರಕವಾಗಿ ಹೊಂದಿಕೊಂಡಿರಬೇಕು ಎಂಬುದನ್ನು ಅರಿತು ಜೀವನ ನಡೆಸುತ್ತಿದ್ದರು. ಆದರೆ ಇಂದು ಪಾಶ್ಚಾತ್ಯರ ಪ್ರಭಾವದಿಂದಲೂ ಅಥವಾ ಜನರ ಜೀವನ ಶೈಲಿಯ ಬದಲಾವಣೆಯಿಂದಲೂ ಈ ಎಲ್ಲಾ ಸಂಬಂಧಗಳ ನಡುವೆ ಬಿರುಕು ಹೆಚ್ಚುತ್ತಿವೆ ಎಂದರು.
ಸಂವಾದ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರಾದ ಮರುಳಪ್ಪ ದಂಪತಿ ಉದ್ಘಾಟಿಸಿದರು,  ಪ್ರತಿಭಾಸ್ವಾಮಿ ಪ್ರಾರ್ಥಿಸಿ, ಸಂಘದ ಸಂಚಾಲಕ ಶ್ರೀಧರ್ ಅಂಬೇಕರ್ ಸ್ವಾಗತಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement