ಗುಣಮಟ್ಟದ ಬಟ್ಟೆ ರಿಯಾಯಿತಿ ದರದಲ್ಲಿ ಒದಗಿಸುವ ಗುರಿಗಾಗಿ ಮಾರಾಟ ಮೇಳ
ನೆಲಮಂಗಲ: ಕೈಮಗ್ಗ ನೇಕಾರರಿಗೆ ನಿರಂತರ ಉದ್ಯೋಗ ಮತ್ತು ಗ್ರಾಹಕರಿಗೆ ಗುಣಮಟ್ಟದ ಬಟ್ಟೆಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವ ಗುರಿ ಸಾಧನೆಗಾಗಿ ಮಾರಾಟ ಮೇಳವನ್ನು ನಡೆಸಲಾಗುತ್ತಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ್ ತಿಳಿಸಿದರು.
ಅವರು ಗುರುವಾರ ಪಟ್ಟಣದ ಶ್ರೀನಿವಾಸ ಸಮುದಾಯ ಭವನದಲ್ಲಿ ಭಾರತ ಸರ್ಕಾರದ ಜವಳಿ ಮಂತ್ರಾಲಯ ಮತ್ತು ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿಯಾಗಿ ಏರ್ಪಡಿಸಿದ್ದ 6 ದಿನಗಳ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕೈಮಗ್ಗ ಸಹಕಾರಿ ಸಂಘ, ಸ್ವಸಹಾಯ ಗುಂಪುಗಳಿಂದ ಸ್ವತಃ ಉತ್ಪಾದಿಸಿರುವ ವೈವಿಧ್ಯಮಯ ಹತ್ತಿ, ರೇಷ್ಮೆ, ಉಣ್ಣೆ ಬಟ್ಟೆಗಳು ಹಾಗೂ ಮನಮೋಹಕ ಉತ್ಪನ್ನ, ವಿವಿಧ ವಿನ್ಯಾಸದ ಸಿದ್ಧ ಉಡುಪುಗಳು ಸೇರಿದಂತೆ ರೇಷ್ಮೆ, ಕಾಟನ್ ಸೀರೆಗಳು ಶೇ.20ರಷ್ಟು ರಿಯಾಯಿತಿ ಕಾರಣ ಮೇಳಕ್ಕೆ ಬರುವವರಿಗೆ ಅನುಕೂಲ ಎಂದರು.