ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಿ.ಎಸ್.ಶಿವರುದ್ರಪ್ಪ ಮಾನವತಾವಾದಿ

Rashmi Kasaragodu
Updated On : 27 Dec 2013, 1:58 am

ಕ.ಪ್ರ.ವಾರ್ತೆ   ರಾಮನಗರ    ಡಿ.26
ಜೋಗರದೊಡ್ಡಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಅಗಲಿದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯ ನಿರ್ದೇಶಕ ಎಂ.ವೆಂಕಟೇಶ ಶೇಷಾದ್ರಿ ಮಾತನಾಡಿ, ದೇಶ ಕಂಡ ಮಹಾ ಚೇತನ, ಮಾನವತಾವಾದಿ, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕವು ಬಡವಾಗಿದೆ ಎಂದರು.  ಡಾ.ಜಿಎಸ್ಎಸ್ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವವಾದ ಕೊಡುಗೆ ನೀಡಿದ್ದಾರೆ. ಅವರು ಯಾವುದೇ ವಿವಾದಕ್ಕೆ ಗುರಿಯಾಗದೆ ನಿಸ್ಪೃಹ ಮತ್ತು ಅರ್ಥಪೂರ್ಣ ಜೀವನ ನಡೆಸಿದರು. ಅವರು ರಚಿಸಿರುವ ಭಾವಪೂರ್ವಕ ಗೀತೆಗಳನ್ನು ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಎಂದರು. ಈ ವೇಳೆ ಸಂಸ್ಥೆಯ ಅಧ್ಯಾಪಕ ಜಿ.ಎಸ್.ಸಿದ್ದಪ್ಪ, ಉಮೇಶ್ ಗುಡಿಗಾರ್, ಚಂದ್ರಶೇಖರ್, ನರೇಶ್ ಕುಮಾರ್, ದೇವರಾಜ್, ಶಿವಕುಮಾರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement