ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುಮಕೂರಿಗೆ ಕಂಚಿ ಶ್ರೀ

Rashmi Kasaragodu
Updated On : 27 Dec 2013, 1:58 am

ಕ.ಪ್ರ.ವಾರ್ತೆ   ತುಮಕೂರು   ಡಿ.26
ಕಂಚಿ ಕಾಮಕೋಟಿ ಪೀಠಾಧಿಪತಿ ಜಯೇಂದ್ರ ಸರಸ್ವತಿ ಸ್ವಾಮಿಗಳು ಜನವರಿ 3 ರ ಶುಕ್ರವಾರ ತುಮಕೂರು ನಗರಕ್ಕೆ ಆಗಮಿಸುತ್ತಿದ್ದಾರೆ.
ಅಂದು ಮಧ್ಯಾಹ್ನ 3-30 ಗಂಟೆಗೆ ಶ್ರೀಗಳನ್ನು ಶಿವಕುಮಾರಸ್ವಾಮೀಜಿ ವೃತ್ತದಲ್ಲಿ ಸ್ವಾಗತ ನೀಡಿ ಶಂಕರಮಠದವರೆಗೆ ತೆರೆದ ವಾಹನದಲ್ಲಿ ಶೋಭಾಯಾತ್ರೆಯಲ್ಲಿ ಕರೆತರಲಾಗುವುದು.
ಎಲ್ಲಾ ವಿಪ್ರ ಸಂಘಟನೆಗಳ ಪುರುಷ ಬಂಧುಗಳು ಬಿಳಿ ಸಮವಸ್ತ್ರ ಧರಿಸಿ, ಮಹಿಳಾಮಂಡಳಿಗಳ ಮಾತೆಯರು ಮತ್ತು ಸಹೋದರಿಯರು ತಮ್ಮ ಸಂಘದ ಸಮವಸ್ತ್ರದೊಂದಿಗೆ ಆಗಮಿಸಿ ವೇದಸ್ತೋತ್ರಗಳನ್ನು ಪಠಿಸುತ್ತ ಶ್ರೀಗಳನ್ನು ಸ್ವಾಗತಿಸಿ ಅವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಸಿ.ವಿ. ಶ್ರೀನಿವಾಸಮೂರ್ತಿ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರಾಘವೇಂದ್ರ ಕೋರಿದ್ದಾರೆ.
ಶ್ರೀ ಶಂಕರ ಮಠದಲ್ಲಿ ಶ್ರೀಮಠದ ವತಿಯಿಂದ ಶ್ರೀಗಳಿಗೆ ಧೂಳೀ ಪಾದಪೂಜೆ ನಡೆಯಲಿದ್ದು ನಗರ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ವಿಪ್ರ ಸಂಘ ಸಂಸ್ಥೆಗಳವರಿಗೆ ಫಲ ಸಮರ್ಪಣೆ ಮತ್ತು ಕೊನೆಯಲ್ಲಿ ಜಗದ್ಗುರುಗಳಿಂದ ಆಶೀರ್ವಚನ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement