ಬಾಲ್ಬ್ಯಾಡ್ಮಿಂಟನ್ನಲ್ಲಿ ಅಂತರ ವಿವಿ ಮಟ್ಟಕ್ಕೆ ಆಯ್ಕೆ
ಹುಳಿಯಾರು: ತಮಿಳುನಾಡಿನ ಕಾರೈಕುಡಿಯ ಅಲಗಪ್ಪ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ನಡೆಯುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಬಾಲ್ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ. ವಿಭಾಗದ ವಿದ್ಯಾರ್ಥಿ ನಸೀಬ್ ರೆಹಮಾನ್ ಆಯ್ಕೆಯಾಗಿದ್ದು, ಪ್ರಾಂಶುಪಾಲ ಆರ್. ಮೂಗೇಶಪ್ಪ, ದೈಹಿಕ ನಿರ್ದೇಶಕ ಆರ್. ಶಿವಯ್ಯ ಸೇರಿದಂತೆ ಉಪನ್ಯಾಸಕ ವರ್ಗದವರು ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.
ಶಾಲಾ ಕಲಿಕೋತ್ಸವ ಉದ್ಘಾಟನೆ
ತಿಪಟೂರು: ಪಟ್ಟಣದ ಸ್ಟೆಲ್ಲಾ ಮೇರೀಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ, ನಗರಸಭಾ ಸದಸ್ಯೆ ರೇಖಾ ಅನೂಪ್, ಸಿ.ಆರ್.ಪಿ.ಪಟ್ಟಾಭಿರಾಮು, ಸ್ಟೆಲ್ಲಾ ಮೇರೀಸ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೂರ್ದ್ಮೇರಿ ಇದ್ದರು.