ಭಾರತ ಕಂಡ ಶ್ರೇಷ್ಠ ಪ್ರಧಾನಿ ವಾಜಪೇಯಿ: ಬಿಜೆಪಿ
ತುಮಕೂರು: ದೇಶ ಕಂಡ ಅತ್ಯಂತ ಶ್ರೇಷ್ಠ ಸಮರ್ಥ ಪ್ರಧಾನಿಗಳಲ್ಲಿ ಅಟಲ್ ಬಿಹಾರಿ ವಾಜಪೇಯಿರವರು ಒಬ್ಬರಾಗಿದ್ದರು ಎಂದು ಬಿಜೆಪಿ ನಗರಾಧ್ಯಕ್ಷ ಕೆ.ಪಿ.ಮಹೇಶ ಹೇಳಿದರು.
ನಗರದ ಸಿದ್ದಗಂಗಾ ಕಾಲೇಜು ಮುಂಭಾಗದ ಜೋಡಿ ಮಕ್ಕಾರ್ ದರ್ಗಾ ಮತ್ತು ನಾಗರಕಟ್ಟೆ, ಗಣಪತಿ ದೇವಾಲಯಗಳಲ್ಲಿ ಮಾಜಿ ಪ್ರಧಾನಿ, ಬಿಜೆಪಿ ಹಿರಿಯ ಮುಖಂಡ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಯಸ್ಸು, ಆರೋಗ್ಯ, ಸಿಗಲೆಂದು, ಪ್ರಾರ್ಥಿಸಿದರು.
ಅವರು ಮಾತನಾಡಿ ರಾಷ್ಟ್ರಭಕ್ತ, ಮುತ್ಸದ್ದಿ, ರಾಜಧರ್ಮದ ಮೂಲಕ ತಮ್ಮ ವ್ಯಕ್ತಿತ್ವ ನಡೆದುಕೊಂಡವರು ಮತ್ತು ದೇಶದ ಐಕ್ಯತೆ, ಅಖಂಡತೆ, ಸಮಗ್ರತೆ ದೃಷ್ಟಿಯಿಂದ ಸೇವೆ ಸಲ್ಲಿಸಿದ ವಾಜಪೇಯಿ ಅವರ ಬಗ್ಗೆ ತಿಳಿಸಿ, ದೇಶ ಕಂಡ ಅಪ್ರತಿಮ ಪ್ರಧಾನಿಗಳಲ್ಲಿ ಅವರು ಒಬ್ಬರಾಗಿದ್ದರು ಎಂದು ತಿಳಿಸಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರ್ಯವಾಗಿ ಅಧಿಕಾರಕ್ಕೆ ಬರಲು ವಾಜಪೇಯಿ ನಂತರ ನರೇಂದ್ರ ಮೋದಿ ಸಮರ್ಥರಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ಪಿ. ಕೃಷ್ಣಪ್ಪ, ಕಾರ್ಯದರ್ಶಿ ಸ್ನೇಕ್ ನಂದೀಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಾಹೆಗ್ಗಡೆ, ನಗರಾಧ್ಯಕ್ಷೆ ಗೀತಾ ಎನ್. ಶಿವಣ್ಣ, ನಗರ ಪ್ರಧಾನ ಕಾರ್ಯದರ್ಶಿ ನಾಗಭೂಷಣ್ (ಕುಬೇರ್), ಬಿಜೆಪಿ ಮುಖಂಡರಾದ ಕುಮಾರಸ್ವಾಮಿ, ಅಣ್ಣೇತೋಟ ಶ್ರೀನಿವಾಸ್, ಕೆ. ಉಮೇಶ್ (ಉಮಾಶಂಕರ್), ನಾಗಪ್ಪ, ಎನ್.ಎನ್. ಗೋಪಾಲಕೃಷ್ಣ (ಗ್ಯಾಸ್), ಎಂ.ಗೋಪಿ, ನಟರಾಜ್ ಮೊದಲಿಯಾರ್, ಆರ್.ಎಸ್. ಸೋಮಶೇಖರ್, ಆರ್.ಎಚ್. ಶಿವಕುಮಾರ್, ಸೌಭಾಗ್ಯಮ್ಮ, ಟಿ.ಸಿ.ಪ್ರೇಮಲತಾ, ಬಿ.ಎಸ್. ಉಮೇಶ್, ಸೈಯದ್ನದೀಂ, ಹುಮಾಯನ್ ಪಾಷ, ಹಫೀ ಉಲ್ಲಾಖಾನ್, ಬಾಬು ಮುಂತಾದ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು. ಅಟಲ್ ಬಿಹಾರಿ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಸಿಹಿ ಹಂಚಿ ಹಂಚಿಕೊಂಡರು.