ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸೌಹಾರ್ದ ಸಂಘಗಳಿಗೆ ಷೇರುದಾರರೇ ನಿಜವಾದ ಆಧಾರ ಸ್ತಂಭ

Rashmi Kasaragodu
Updated On : 27 Dec 2013, 1:48 am

ತುಮಕೂರು: ಯಾವುದೇ ಸಹಕಾರಿ ಸೌಹಾರ್ದ ಸಂಘಗಳಿಗೆ ಷೇರುದಾರರೇ ನಿಜವಾದ ಆಧಾರ ಸ್ತಂಭಗಳು ಎಂದು ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಆರ್.ಎಸ್. ಹುಚ್ಚಾಚಾರಿ ಅಭಿಪ್ರಾಯಪಟ್ಟರು.
ಅವರು ನಗರದ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ಅಸ್ತಿತ್ವಕ್ಕೆ ಬಂದ ನೊಳಂಬ ಮಿತ್ರಕೂಟ ಪತ್ತಿನ ಸೌಹಾರ್ದ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ನಾಗರಿಕ ಪ್ರಪಂಚದಲ್ಲಿ ಸಹಕಾರಿ ಸಂಘಗಳ ಅಸ್ತಿತ್ವವನ್ನು ಕುರಿತು ಮಾತನಾಡಿದ ಅವರು ಸಾಲ ಕೊಡುವುದು ಎಷ್ಟು ಮುಖ್ಯವೋ ಅದನ್ನು ಕ್ರಮ ಬದ್ಧವಾಗಿ ಹಿಂತಿರುಗಿಸುವುದು ಅಷ್ಟೆ ಮುಖ್ಯವೆಂದರು.
ಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮೀಜಿ ಅವರ ಪಾದಪೂಜೆಯಂದಿಗೆ ಸಂಘ ಅಸ್ತಿತ್ವಕ್ಕೆ ಬಂತು. ಮುಖ್ಯ ಅತಿಥಿಯಾಗಿ ಸಿ.ಎ. ಸೋಮೇಶ್ವರ ಗುಪ್ತ, ಎಂ.ಎಸ್. ಮಹದೇವಯ್ಯ, ಬಿ. ಗಂಗಾಧರಯ್ಯ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಪ್ರವರ್ತಕ ಆರ್.ಎಸ್. ಸದಾನಂದ ಮಾತನಾಡಿ ನೊಳಂಬ ಮಿತ್ರಕೂಟ ಪತ್ತಿನ ಸೌಹಾರ್ದ ಸಹಕಾರಿ ಸಂಘ ಆರಂಭವಾಗಿದ್ದು ಸದಸ್ಯರ, ಆಡಳಿತ ಮಂಡಳಿಯವರ ಹಾಗೂ ನೌಕರರ ಸಹಕಾರದೊಂದಿಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತದೆ ಎಂದು ನುಡಿದರು. ಎಚ್.ಡಿ. ಶಿವಣ್ಣ ಪ್ರಾರ್ಥಿಸಿದರು. ಹಾಲನೂರು ಲೇಪಾಕ್ಷ ಸ್ವಾಗತಿಸಿದರು. ಎಸ್.ಆರ್. ಪಂಚಾಕ್ಷರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾದಾಪುರ ಶಿವಣ್ಣ ವಂದಿಸಿದರು. ಎಂ.ಜಿ. ಸಿದ್ದರಾಮಯ್ಯ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement