ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹಾಲು ಉತ್ಪಾದಕರ ಸಂಘದ ಕಟ್ಟಡಕ್ಕೆ ಅನುದಾನ ಬಿಡುಗಡೆ

Rashmi Kasaragodu
Updated On : 27 Dec 2013, 1:56 am

ತುರುವೇಕೆರೆ: ತಾಲೂಕಿನ ಹೆಗ್ಗರೆಯ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ನೀಡಲಾಗುವ 2 ಲಕ್ಷ ರು.ಗಳ ಅನುದಾನದಲ್ಲಿ ಮೊದಲ ಕಂತಾಗಿ ಸುಮಾರು 75 ಸಾವಿರ ರು.ಗಳನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಜಿಲ್ಲಾ ಹಾಲು ಒಕ್ಕೂಟದ ನೂತನ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ವಿತರಣೆ ಮಾಡಿದರು.
ಇದೇ ವೇಳೆ ಹೆಗ್ಗೆರೆ ಹಾಗೂ ಹಳ್ಳದ ಹೊಸಳ್ಳಿಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಬಡ್ಡಿ ರಹಿತ ಸಾಲವಾಗಿ ತಲಾ 50 ಸಾವಿರ ರು.ಗಳನ್ನು ನೀಡಲಾಯಿತು. ತಾಲೂಕಿನಲ್ಲಿರುವ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕಾಗಿ ತಲಾ 75 ಸಾವಿರ ರು.ಗಳ ಅನುದಾನ ಹಾಗೂ ಬಡ್ಡಿರಹಿತ ಸಾಲವನ್ನೂ ನೀಡಲಾಗುವುದು. ಕೆಲ ಘಟಕಗಳಿಂದ ಸಂಗ್ರಹಿಸಿದ ಹಾಲನ್ನು ಶೀಥಲೀಕರಣ ವ್ಯವಸ್ಥೆಯಿಂದ ಕಾಪಾಡುವ ಸಲುವಾಗಿ ಕಟ್ಟಡ ನಿರ್ಮಾಣ ಮಾಡಲು ಸುಮಾರು 1.6 ಲಕ್ಷ ರು.ಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ನಿರ್ದೇಶಕ ಮಹಲಿಂಗಯ್ಯ ಹೇಳಿದರು.
ಜಿಲ್ಲಾ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ. ವಿವೇಕಾನಂದ ಶೆಟ್ಟಿ, ಸಹಾಯಕ ವ್ಯವಸ್ಥಾಪಕ ಚಿಕ್ಕಗಂಗಯ್ಯ, ರೈತ ಬಂಧು ಕಿರಣ್ ಹಾಗೂ ಜೆಡಿಎಸ್ ಮುಖಂಡ ನಂಜೇಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement