ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಇಂದು ಇಂಗ್ಲಿಷ್ ಕೈಪಿಡಿ ವಿತರಣೆ

Mainashree
Updated On : 27 Dec 2013, 9:54 am

ತುಮಕೂರು: ಇಲ್ಲಿನ ಸಿದ್ಧಗಂಗಾ ಮಹಿಳಾ ಪ.ಪೂ. ಕಾಲೇಜಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಚಾರ್ಯರ ಸಂಘದ ವತಿಯಿಂದ ಡಿ.28 ರಂದು ಇಂಗ್ಲಿಷ್ ಕೈಪಿಡಿ ವಿತರಣೆ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ.
ಸಂಸದ ಜಿ.ಎಸ್. ಬಸವರಾಜು ತಮ್ಮ ಸಂಸದರ ಅನುದಾನದಿಂದ ನೀಡಿದ 1 ಲಕ್ಷ ರು. ಹಣದಲ್ಲಿ ಇಂಗ್ಲಿಷ್ ಕೈಪಿಡಿ ಮುದ್ರಿಸಿ ವಿತರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಬಿ. ಸಿದ್ದಯ್ಯ ಅವರನ್ನು ಸನ್ಮಾನಿಸಲಾಗುವುದು.
ಹಾಗೆಯೇ 2013 ಏಪ್ರಿಲ್ ನಿಂದ ಡಿಸೆಂಬರ್ 2013 ರವರೆಗೆ ನಿವೃತ್ತರಾಗಿರುವ ಪ.ಪೂ. ಕಾಲೇಜಿನ ಪ್ರಾಚಾರ್ಯ ಸಿ. ಯತಿರಾಜು, ಎಸ್. ಕುಮಾರಸ್ವಾಮಿ, ಟಿ.ಎನ್. ಗೋವಿಂದರಾಜು, ಜಯದೇವಯ್ಯ, ಗಿರಿಜ, ಎಚ್.ಎಲ್. ಜಯದೇವಪ್ಪ ಅವರನ್ನು ಸನ್ಮಾನಿಸಲಾಗುವುದು.
ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯಪ್ರಕಾಶ್ ಮಾತನಾಡಲಿದ್ದು ಮುಖ್ಯ ಅತಿಥಿಯಾಗಿ ಸಿದ್ಧಗಂಗಾ ಪದವಿ ಹಾಗೂ ಪ.ಪೂ. ಕಾಲೇಜಿನ ಪ್ರಾಚಾರ್ಯ ಡಾ. ನಾಗಭೂಷಣ್ ಹಾಗೂ ಜಿ.ಎಸ್. ರೇಣುಕಪ್ಪ ಆಗಮಿಸಲಿದ್ದಾರೆ. ಸಂಘದ ಅಧ್ಯಕ್ಷ ಕೆ. ಶಿವರುದ್ರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement