ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಿ.ಎಸ್.ಶಿವರುದ್ರಪ್ಪಗೆ ಭಾವಪೂರ್ಣ ಶ್ರದ್ಧಾಂಜಲಿ

Mainashree
Updated On : 27 Dec 2013, 9:55 am

ಶಿರಾ: ಕರ್ನಾಟಕ ಜಾನಪದ ಪರಿಷತ್ತು, ಶಿರಾ ಘಟಕದ ವತಿಯಿಂದ ಅಗಲಿದ ನಾಡೋಜ ಜಿ.ಎಸ್.ಶಿವರುದ್ರಪ್ಪನವರಿಗೆ  ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿತು.
ನಗರದ ಪರಿಷತ್ತಿನ ಕಾರ್ಯಾಲಯದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಜಿ.ಎಸ್.ಎಸ್.ಅವರ ಸಮಗ್ರ  ಬದುಕನ್ನು ಅವಲೋಕಿಸಿ, ಗ್ರಾಮೀಣ ಪರಿಸರದಲ್ಲಿ ಹುಟ್ಟಿ, ವಿದ್ಯಾವಂತರಾಗಿ ಏನೆಲ್ಲಾ ಸಾಧಿಸಬಹುದು, ಎತ್ತರಕ್ಕೆ ಏರಬಹುದು ಎಂಬುದಕ್ಕೆ ಜಿ.ಎಸ್.ಎಸ್ ನಿದರ್ಶನ. ಕವಿ ಕಲಾವಿದ ವಿಮರ್ಶಕ, ಸಂಶೋಧಕ ಈ ಎಲ್ಲಕ್ಕಿಂತ ಮಾನವೀಯ ಬದುಕಿನ ಎತ್ತರದ ಜೀವ ಎಂದು ತುಮಕೂರು ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಬಣ್ಣಿಸಿದರು.
ಉಪಪ್ರಾಂಶುಪಾಲ ರಾಮಚಂದ್ರಪ್ಪ, ಜಿ.ಎಸ್.ಎಸ್- ಕುವೆಂಪು ಗುರು ಶಿಷ್ಯ ಪರಂಪರೆಗೆ ಮಾದರಿಯಾಗಿದ್ದರು. ಕುವೆಂಪು ಅವರ ತತ್ವಾದರ್ಶದಂತೆಯೇ ಜಿ.ಎಸ್.ಎಸ್. ಬೆಳೆದರು ಎಂದು ವಿವರಿಸಿ ಅವರ ಕೆಲವು ಹಾಡುಗಳನ್ನು ಹಾಡುವ ಮೂಲಕ ಸ್ಮರಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಕರ್ನಾಟಕದವರಾದರೂ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು.
ಇಂಥವರಿಂದ ರಾಷ್ಟ್ರಕವಿ ಗೌರವಕ್ಕೆ ಸಾರ್ಥಕತೆ ದಕ್ಕಿತು. ಇಂದಿನ ಯುವಕವಿಗಳು ಜಿಎಸ್‌ಎಸ್ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾಟನಹಳ್ಳಿ ಉಗ್ರಪ್ಪ, ಗುಬ್ಬಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗ್ರಂಥಪಾಲಕ ಜಿ.ಟಿ.ಕುಮಾರ್, ಶಿಕ್ಷಕ ಚಿರತಹಳ್ಳಿ ನರಸಿಂಹಮೂರ್ತಿ, ಕುವೆಂಪು ಜಿಎಸ್‌ಎಸ್ ನಡುವಿನ ಸಾಹಿತ್ಯ ಬದುಕನ್ನು ಮೆಲುಕು ಹಾಕಿದರು.
ಸಭೆಯು ಶಿರಾ-ಅಮರಾಪುರ ಮುಖ್ಯ ರಸ್ತೆಗೆ ರಾಷ್ಟ್ರಕವಿ ಜಿ.ಎಸ್.ಎಸ್. ಅವರ ಹೆಸರಿಡಬೇಕೆಂದು ನಗರಸಭೆಗೆ  ಆಗ್ರಹಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement