ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಂಬಾಕು ಪದಾರ್ಥ ನಿಷೇಧ: ಆದೇಶ ಪಾಲನೆಯಾಗುತ್ತಿಲ್ಲ- ಆಕ್ರೋಶ

Mainashree
Updated On : 27 Dec 2013, 10:21 am

ಕುಣಿಗಲ್: ಶಾಲಾ ಕಾಲೇಜುಗಳಿಂದ ನೂರು ಮೀಟರ್ ಅಂತರದಲ್ಲಿ ತಂಬಾಕು ಪದಾರ್ಥ ಮಾರಾಟ ನಿಷೇಧಿಸುವಂತೆ, ಈ ಬಗ್ಗೆ ಫಲಕಗಳನ್ನು ಎಲ್ಲಾ ಶಾಲಾ ಕಾಲೇಜುಗಳ ಪ್ರದರ್ಶಿಸುವಂತೆ ನ್ಯಾಯಾಲಯ ಆದೇಶ ಮಾಡಿದ್ದರೂ, ತಾಲೂಕಿನಲ್ಲಿ ಬಹುತೇಕ ಕಡೆ ನಿಯಮ ಪಾಲನೆ ಅಗುತ್ತಿಲ್ಲವೆಂದು ಕರವೇ ಅಧ್ಯಕ್ಷ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಪ್ರೌಢಶಾಲೆ, ಕಾಲೇಜು ಸೇರಿದಂತೆ ಖಾಸಗಿ ಶಾಲಾ, ಕಾಲೇಜುಗಳಿಂದ ನೂರು ಮೀಟರ್ ಅಂತರದಲ್ಲಿ ತಂಬಾಕು ಪದಾರ್ಥಗಳ ಮಾರಾಟ ನಿಷೇಧಿಸಿ ಹೈಕೋರ್ಟ್ ಆದೇಶ ಮಾಡಿದ್ದು ಈ ನಿಟ್ಟಿನಲ್ಲಿ ಶಾಲಾ, ಕಾಲೇಜುಗಳು ಫಲಕ ಪ್ರದರ್ಶಿಸಬೇಕಿದೆ. ಸಂಬಂಧಪಟ್ಟ ಇಲಾಖೆಯವರು ಶಾಲಾ, ಕಾಲೇಜು ವ್ಯಾಪ್ತಿಯ ಮೂರು ಮೀಟರ್ ತಂಬಾಕು ಮುಕ್ತ ವಲಯವನ್ನಾಗಿ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಬೇಕಿದೆ. ದುರಂತ ಎಂದರೆ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ನಿಯಮಾವಳಿ ಪಾಲನೆ ಮಾಡುವಲ್ಲಿ ಕೆಲಶಾಲೆ, ಕಾಲೇಜುಗಳು ವಿಫಲವಾಗಿವೆ. ಸಂಬಂಧಿಸಿದ ಶಿಕ್ಷಣಾಧಿಕಾರಿಗಳಿಗೆ ಈಗಾಗಲೆ ಶಿಕ್ಷಣ ಅಯುಕ್ತರ ಕಾರ್ಯಾಲಯದಿಂದ ಸಾಕಷ್ಟು ಸುತ್ತೋಲೆಗಳು ರವಾನೆಯಾಗಿದ್ದರೂ, ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯಲ್ಲಿನ ಬಹುತೇಕ ಖಾಸಗಿ ಶಾಲೆ, ಕಾಲೇಜುಗಳು ಈ ನಿಯಮ ಪಾಲನೆಗೆ ಯಾವುದೇ ಕ್ರಮ ಕೈಗೊಳ್ಳದೆ ನ್ಯಾಯಾಲಯ ಆದೇಶಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ಬಹುತೇಕ ಸರ್ಕಾರಿ, ಶಾಲಾ ಕಾಲೇಜುಗಳ ಮುಂಭಾಗದಲ್ಲಿ ಫಲಕ ಹಾಕಲಾಗಿದೆ. ಆದರೆ, ಬಹುತೇಕ ಖಾಸಗಿ ಶಾಲೆ, ಕಾಲೇಜುಗಳವರು ಈ ಕ್ರಮ ಪಾಲಿಸುವಲ್ಲಿ ವಿಫಲರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement