ಮೈತ್ರಿ ರಜತ ಮಹೋತ್ಸವ
ತುಮಕೂರು: ತುಮಕೂರು ನಗರ ವೀರಶೈವ ಸೇವಾ ಸಮಿತಿಯ ಮೈತ್ರಿ ಮಹಿಳಾ ಸಂಘದ ರಜತ ಮಹೋತ್ಸವ ಸಮಾರಂಭ ಡಿ.28 ರಂದು ಬೆಳಗ್ಗೆ 10.30 ಕ್ಕೆ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಏರ್ಪಾಟಾಗಿದೆ.
ಕಾರ್ಯಕ್ರಮವನ್ನು ಮಾಜಿ ಶಾಸಕಿ, ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಉದ್ಘಾಟಿಸಲಿದ್ದಾರೆ. ಮೈತ್ರಿ ಸಿರಿ ಸ್ಮರಣ ಸಂಚಿಕೆಯನ್ನು ಸಂಸದ ಜಿ.ಎಸ್. ಬಸವರಾಜು ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಡಾ. ಉಮಾ ಗಲಗಲಿ, ಶಾಸಕ ಡಾ. ರಫೀಕ್ ಅಹಮದ್, ಎಂಎಲ್ಸಿ ಡಾ.ಎಂ.ಆರ್. ಹುಲಿನಾಯ್ಕರ್, ಕೈಗಾರಿಕೋದ್ಯಮಿ ಎನ್.ಆರ್. ಜಗದೀಶ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಶ್ರೀನಿವಾಸ್, ವೀರಶೈವ ಸಮಾಜದ ಅಧ್ಯಕ್ಷ ಜಿ.ಆರ್. ಶಿವಕುಮಾರ್, ಮೈತ್ರಿ 2013 ರ ಅಧ್ಯಕ್ಷೆ ಮೀನಾ ಮಹೇಶ್ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಪಾರ್ವತಿ ಜಗದೀಶ್ ವಹಿಸಲಿದ್ದಾರೆ.
ಸಂಜೆ 4-30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಾಟಾಗಿದೆ. ಸಮಾರಂಭವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಹಕಾರ ಇಲಾಖೆ ಕಾರ್ಯದರ್ಶಿ ಡಾ. ಸಿ. ಸೋಮಶೇಖರ್, ತುಮಕೂರು ವೀರಶೈವ ಬ್ಯಾಂಕ್ ಅಧ್ಯಕ್ಷ ಮಂಜುನಾಥ್, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಮೀನಾ ಮಹೇಶ್ ಪಾಲ್ಗೊಳ್ಳಲ್ಲಿದ್ದಾರೆ.