ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶಿವರುದ್ರಪ್ಪಗೆ ಶ್ರದ್ಧಾಂಜಲಿ

Mainashree
Updated On : 27 Dec 2013, 10:22 am

ಮಧುಗಿರಿ: ಅಂತಃಕರಣ ತುಂಬಿದ್ದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ವ್ಯಕ್ತಿತ್ವ ಕನ್ನಡ ಸಾರಸ್ವತ ಲೋಕಕ್ಕೆ ಅನೇಕ ಉತ್ತಮ ಶಿಷ್ಯ ವೃಂದ ನೀಡಿದೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ನುಡಿದರು.
ಇಲ್ಲಿನ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಜಿಎಸ್ಎಸ್ ಕುವೆಂಪು ಶಿಷ್ಯರಾಗಿ ವಿಶ್ವಮಾನವ ತತ್ವದಲ್ಲಿ ನಂಬಿಕೆ ಇಟ್ಟು ಅದರಂತೆ ನಡೆದವರು.ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶೋಕ ವ್ಯಕ್ತಪಡಿಸಿದರು.
ಅದ್ಯಕ್ಷತೆ ವಹಿಸಿದ್ದ ತಾ.ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಕನ್ನಡ ಸಾರಸ್ವತ ಲೋಕದ ಮೇರು ಮುಕುಟದಂತಿದ್ದ ಡಾ.ಜಿಎಸ್ಎಸ್ ಅವರು ರಚಿಸಿರುವ ಗೀತೆಗಳು ಕನ್ನಡಿಗರ ಮನೆ ಮನೆಗಳಲ್ಲಿ ಅಜರಾಮರಾಗಿದೆ. ಸರಳ ಸ್ನೇಹಪರ ವ್ಯಕ್ತಿತ್ವದ ಜಿಎಸ್ಎಸ್ಕ್ನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ.  ಅವರ  ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದರು.
ಶಿಕ್ಷಕ ರಂಗನಾಥಪ್ಪ, ಮೊ.ನಾ.ಕೃಷ್ಣಮೂರ್ತಿ, ರಂಗಕರ್ಮಿ ಪ.ವಿ.ಸುಬ್ರಹ್ಮಣ್ಯ, ಜಿಎಸ್ಎಸ್ ಗುಣಗಾನ ಮಾಡಿದರು. ತಾ.ಕಸಾಪ ಪದಾಧಿಕಾರಿಗಳಾದ ಅಮರಾವತಿ ದ್ರೇಹಚಾರ್, ಪತ್ರಕರ್ತ ಬಂಡಿಚೌಡಯ್ಯ, ಬ್ಯಾಂಕ್ ಶ್ರೀರಾಯ್ಯ, ರಂಗರಾಜು, ರಂಗಧಾಮಯ್ಯ, ನಾಗರಾಜು, ಎಸ್.ಎನ್.ಹನುಮಂತರಾಯ, ಗಾಯಿತ್ರಿ ನಾರಾಯಣ್ ಅನೇಕರು ಉಪಸ್ಥಿತರಿದ್ದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement