ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸುದ್ದಿ ಸಂಕ್ಷೇಪ

Mainashree
Updated On : 27 Dec 2013, 9:56 am

ನಾಳೆ ಜಿಲ್ಲಾ ಸಮ್ಮೇಳನ
ತುಮಕೂರು: ಎಸ್‌ಎನ್‌ಎಲ್‌ನಲ್ಲಿ ಗುತ್ತಿಗೆ ಮತ್ತು ಹಂಗಾಮಿ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿ ಡಿ. 29 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ನಗರದ ರಂಗತಾಲೀಮು ಸಂಭಾಗಣದಲ್ಲಿ 2ನೇ ತುಮಕೂರು ಜಿಲ್ಲಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಉದ್ಘಾಟನೆಯನ್ನು ಬಿಎಸ್‌ಎನ್‌ಎಲ್ ಕರ್ನಾಟಕದ ವಲಯ ಕಾರ್ಯದರ್ಶಿ ಸಿ.ಕೆ.ಗುಂಡಣ್ಣ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಕೆ.ಮಹಂತೇಶ್, ಬಾಲಕೃಷ್ಣ, ಸೈಯದ್ ಮುಜೀಬ್ ಭಾಗವಹಿಸುವರು. ಬೋರಯ್ಯ, ಎನ್.ಕೆ. ಸುಬ್ರಹ್ಮಣ್ಯ, ಎಚ್.ಕೆ. ಚೆಲುವರಾಜ್, ಚಿಕ್ಕಣ್ಣ ಮುಂತಾದವರು ಭಾಗವಹಿಸುವರು. ಅಧ್ಯಕ್ಷತೆಯನ್ನು ನಾಗೇಶ್ವರಯ್ಯ.ಕೆ ವಹಿಸುವರು.
ಗೃಹರಕ್ಷಕ ದಿನಾಚರಣೆ
ತುಮಕೂರು: ಇಲ್ಲಿನ ಜಿಲ್ಲಾ ಗೃಹರಕ್ಷಕ ದಳ ಕಚೇರಿ ಮುಂಭಾಗ ಡಿ.28 ರಂದು ಬೆಳಗ್ಗೆ 10 ಗಂಟೆಗೆ ಗೃಹರಕ್ಷಕ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಟ ಕೆ. ರವಿಕುಮಾರ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ವಿದ್ಯಾವಾಚಸ್ಪತಿ ಕವಿತಾಕೃಷ್ಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕೆ.ಬಿ. ಜಯಣ್ಣ, ಪುಟ್ಟಯ್ಯ ಆಗಮಿಸಲಿದ್ದಾರೆ. ಪಿ. ಸುಧೀರ್, ಆಂಜಿನಪ್ಪ ಅವರನ್ನು ಸನ್ಮಾಮಿಸಲಾಗುವುದು.
ಇಂದು, ನಾಳೆ ನಾಟಕ
ಇಲ್ಲಿನ ಜಯದೇವ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಡಿ.28 ಮತ್ತು 29 ರಂದು ನಾಟಕೋತ್ಸವ ಆಯೋಜಿಸಲಾಗಿದೆ. ಕೀರ್ತನ ರಂಗ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್ ವತಿಯಿಂದ ಈ ನಾಟಕೋತ್ಸವ ನಡೆಯಲಿದೆ. 28 ರಂದು ಸಂಜೆ 7 ಗಂಟೆಗೆ ನಡೆಯಲಿರುವ ನಾಟಕೋತ್ಸವ ಸಾನಿಧ್ಯವನ್ನು ಶಿವಮೂರ್ತಿ ಮುರುಘಾ ಶರಣರು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ವಹಿಸಲಿದ್ದಾರೆ. ಉದ್ಘಾಟನೆಯನ್ನು ಸಂಸದ ಜಿ.ಎಸ್. ಬಸವರಾಜು ನೆರವೇರಿಸುವರು. ಮುಖ್ಯ ಅತಿಥಿಯಾಗಿ ಎಸ್. ನಾಗಣ್ಣ, ಸಿದ್ಧಗಂಗಗಮ್ಮ ಸಿದ್ಧರಾಮಣ್ಣ, ಬಸವರಾಜ್ ಆಪಿನಕಟ್ಟೆ, ಗುಬ್ಬಿ ಪ್ರಕಾಶ್ ಆಗಮಿಸುವರು. ಸಂಜೆ 7 ಗಂಟೆಗೆ ತಲ್ಲಣಿಸದಿರು ಕಂಡ್ಯ ತಾಳು ಮನವೇ ನಾಟಕ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement