ರೇಷ್ಮೆ ಕೃಷಿ ಇಳುವರಿ ಅಧಿಕ
ಕ.ಪ್ರ.ವಾರ್ತ್ಣೆತುಮಕೂರ್ಣು ಡಿ.28
ಟಿಪ್ಪು ಸುಲ್ತಾನ್ ಕಾಲದಿಂದಲೂ ಜನರು ರೇಷ್ಮೆ ಕೃಷಿಯಲ್ಲಿ ತೊಡಗಿದ್ದಾರೆ. ಆದರೆ ಕೆಲ ತಾಂತ್ರಿಕ ಬದಲಾವಣೆಗಳಿಂದ ಇಂದು ರೇಷ್ಮೆ ಕೃಷಿ ಮಾಡುವ ವಿಧಾನ ಬದಲಾಗಿದ್ದು, ಇಳುವರಿಯ ಪ್ರಮಾಣವೂ ಹೆಚ್ಚಾಗಿದೆ ಎಂದು ರೇಷ್ಮೆ ಮತ್ತು ಕೃಷಿ ಇಲಾಖೆ ಆಯುಕ್ತರು ಮತ್ತು ನಿರ್ದೇಶಕ ಸತೀಶ್ ತಿಳಿಸಿದರು.
ನಗರದ ಟೌನ್ಹಾಲ್ ಬಳಿಯಿರುವ ಶ್ರೀ ಸಿದ್ದಗಂಗಾ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ರೇಷ್ಮೆ ಇಲಾಖೆ ಮತ್ತು ಆತ್ಮ ಸಂಸ್ಥೆ ಆಶ್ರಯದಲ್ಲಿ ಜಿಲ್ಲಾ ರೇಷ್ಮೆ ಬೆಳೆಗಾರರ ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊದಲು ಒಂದು ನೂರು ಹುಳುಗಳಿಗೆ ಕೇವಲ 30 ರಿಂದ 40 ಕೆ.ಜಿ. ಗೂಡು ಮಾತ್ರ ಉತ್ಪತ್ತಿಯಾದರೆ ಇಂದು ಅದರ ಪ್ರಮಾಣ 70 ರಿಂದ 80 ಕೆ.ಜಿ.ಯಿದೆ. ಹೊಸ ಹೊಸ ತಳಿಗಳಿಂದ ರೈತರು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಆದ್ದರಿಂದ ರೇಷ್ಮೆ ಕೃಷಿ ಇಂದು ಕೃಷಿ ಚಟುವಟಿಕೆಯ ಒಂದು ಅಂಗವಾಗಿದೆ ಎಂದು ಸತೀಶ್ ನುಡಿದರು.
ಪ್ರಸ್ತುತ ತುಮಕೂರು ಜಿಲ್ಲೆಯಲ್ಲಿ 4 ಸಾವಿರ ಮಂದಿ ರೇಷ್ಮೆ ಕೃಷಿಕರಿದ್ದು, ಅವರು ತಮ್ಮ ತಮ್ಮಲ್ಲಿಯೇ ಇಲಾಖೆಯ ಸೌಲಭ್ಯಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಮೂಲಕ ರೇಷ್ಮೆ ಕೃಷಿ ಅಭಿವೃದ್ಧಿಗೆ ದೊರೆಯಬಹುದಾದ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿಕೊಳ್ಳಬೇಕಿದೆ ಎಂದರು.
ಸಿದ್ಧ: ಇಲಾಖೆ ಸದಾ ನಿಮ್ಮ ಜೊತೆಗಿದೆ. ಬೆಳೆಗಾರರ ಸಂಖ್ಯೆಗೆ ಅನುಗುಣವಾಗಿ ಚಾಕಿಕೇಂದ್ರಗಳನ್ನು ತೆರೆಯಲು ಅಗತ್ಯ ನೆರವನ್ನು ಸರಕಾರ ನೀಡಲು ಸಿದ್ಧವಿದೆ ಎಂದು ರೇಷ್ಮೆ ಇಲಾಖೆಯ ಆಯುಕ್ತ ಸತೀಶ್ ತಿಳಿಸಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಂಕಲಿಂಗೇಗೌಡ ಮಾತನಾಡಿ, ತುಮಕೂರು ಜಿಲ್ಲೆ ರೇಷ್ಮೆ ಕೃಷಿಗೆ ಹೇಳಿ ಮಾಡಿಸಿದ ಜಾಗ. ಆದರೆ ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಇಲ್ಲಿ ರೇಷ್ಮೆ ಬೆಳಗಾರರ ಸಂಖ್ಯೆ ಕಡಿಮೆ. ವಾರ್ಷಿಕ 2.500 ಮೆ.ಟನ್. ಗೂಡು ಉತ್ಪಾದನೆಯಾದರೆ ಮ00 ಮೆ.ಟನ್. ನೂಲು ಉತ್ಪತ್ತಿಯಾಗುತ್ತಿದೆ. ಇದು ಏನೇನು ಸಾಲದು. ನಿಮ್ಮ ಸೀಡ್ ಏರಿಯಾವನ್ನು ವಿಸ್ತರಿಸಿಕೊಳ್ಳಬೇಕಿದೆ ಎಂದರು.
ಕನಿಷ್ಠ ವಾರ್ಷಿಕ 5 ಸಾವಿರ ಮೆ.ಟನ್ ಗೂಡು ಉತ್ಪಾದಿಸುವ ಮೂಲಕ ಉತ್ಪಾದನೆಯ ಪ್ರಮಾಣವನ್ನು ದ್ವಿಗುಣಗೊಳಿಸಿಕೊಳ್ಳಬೇಕಾಗಿದೆ. ಹಾಗೆಯೇ ವಾರ್ಷಿಕ 3000 ಕೋಟಿ ರು. ವಹಿವಾಟು ಹೊಂದಿರುವ ರೇಷ್ಮೆ ಕೃಷಿ ಕನಿಷ್ಠ 6 ಸಾವಿರ ಕೋಟಿ ರು. ವಾರ್ಷಿಕ ವ್ಯವಹಾರ ನಡೆಸುವಂತೆ ಮಾಡಲು ರೈತರು
ಮುಂದಾಗಬೇಕಾಗಿದೆ ಎಂದು ಸಲಹೆ ನೀಡಿದರು.
ತುಮಕೂರಿನಲ್ಲಿ: ಇದುವರೆಗೂ ರೇಷ್ಮೆ ಬೆಳೆ, ಮಾರಾಟಕ್ಕೆ ಸಂಬಂಧಿಸಿದ ಹೆಚ್ಚು ಉತ್ಪತ್ತಿ ಮಾಡುವ ಕೋಲಾರ, ರಾಮನಗರ ಮತ್ತು ಮೈಸೂರು ಜಿಲ್ಲೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಗೂ ಇತರೆ ಜಿಲ್ಲೆಗಳಷ್ಟೇ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ 2011-12ನೇ ಸಾಲಿನ ರೇಷ್ಮೆ ಕೃಷಿಕರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ತುಮಕೂರಿನಲ್ಲಿ ನಡೆಸಲು ಚಿಂತನೆ ನಡೆದಿದೆ ಎಂದರು.
ಕಳೆದ ಎರಡು ಮೂರು ವರ್ಷಗಳ ನಿರಂತರ ಬರದಿಂದಾಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ತೆಂಗು ರೈತರ ಕೈಸುಟ್ಟಿದೆ. ಇದರಿಂದ ರೈತರು ಪರ್ಯಾಯ ಬೆಳೆಯತ್ತ ಗಮನಹರಿಸುತ್ತಿದ್ದು, ರೇಷ್ಮೆ ಬೆಳೆಗೆ ಒಳ್ಳೆಯ ವಾತಾವರಣವಿರುವುದರಿಂದ ತೆಂಗು ಬೆಳೆಗಾರರ ತೆಂಗಿನ ಜೊತೆಗೆ ಉಪ ಬೆಳೆಯಾಗಿ ರೇಷ್ಮೆ ಕೃಷಿಯಲ್ಲಿ ತೊಡಗುವುದರಿಂದ ಸರಕಾರಿ ನೌಕರರಂತೆ ಕೈತುಂಬ ಸಂಬಳ ಪಡೆಯಬಹುದು ಎಂದು ಪ್ರಧಾನ ಕಾರ್ಯದರ್ಶಿಗಳು ಸಲಹೆ ನೀಡಿದರು.
ಸಿ.ಇ.ಓ ಗೋವಿಂದರಾಜು,ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್. ಪ್ರಭಾಕರ್, ಚನ್ನಬಸವಯ್ಯ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಪುಟ್ಟಲಿಂಗಯ್ಯ, ಸಹಾಯಕ ನಿರ್ದೇಶಕ ಬಾಲಕೃಷ್ಣ, ವಿಜ್ಞಾನಿಗಳಾದ ಡಾ. ವೇದವ್ಯಾಸ, ಡಾ.ಶಿವಶಂಕರ್ ಇನ್ನಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಡಿ.31 ಕ್ಕೆ ನಿವೃತ್ತರಾಗುತ್ತಿರುವ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಂಕರಲಿಂಗೇಗೌಡ ಹಾಗೂ ತುಮಕೂರು ರೇಷ್ಮೆ ಉಪನಿರ್ದೇಶಕ ಪುಟ್ಟಲಿಂಗಯ್ಯ ಅವರನ್ನು ರೇಷ್ಮೆ ಬೆಳೆಗಾರರು ಅಭಿನಂದಿಸಿದರು.