ಶಿಶುವಿಹಾರಕ್ಕೆ ಹೋದ ಬಾಲಕ ನಾಪತ್ತೆ
ಕುಣಿಗಲ್: ಶಿಶುವಿಹಾರಕ್ಕೆ ಹೋದ ಬಾಲಕ ಕಾಣೆಯಾಗಿರುವ ಘಟನೆ ಪಟ್ಟಣದ ಬಿಜಿಎಸ್ ನಗರದಲ್ಲಿ ನಡೆದಿದೆ. ನರಸಿಂಹಯ್ಯ ಕೂಲಿ ಕೆಲಸ ಮಾಡುತ್ತಿದ್ದು, ತಾಯಿ ಭಾಗ್ಯಮ್ಮ ಸಮೀಪದ ಸಾಮಿಲ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ಕೆಲಸಕ್ಕೆ ಹೋಗಿದ್ದು, ಮಗು ಆಕಾಶ್ (5) ಶುಕ್ರವಾರ ಸಮೀಪದ ಶಿಶುವಿಹಾರಕ್ಕೆ ತೆರಳಿದ್ದು, ಸಂಜೆ ಬಹಳ ಹೊತ್ತಾದರೂ ಮಗ ಬಾರದೆ ಗಾಬರಿಗೊಂಡ ಪೋಷಕರು ಶನಿವಾರ ಕುಣಿಗಲ್ ಠಾಣೆಗೆ ದೂರು ನೀಡಿದ್ದಾರೆ.