ಕಪ್ಪು ಪಟ್ಟಿ ಕಟ್ಟಿಕೊಂಡು ಮೌನ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ತುಮಕೂರು,ಡಿ.29
ತುಮಕೂರಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾ ರೇಲ್ವೆ ಯೋಜನೆ, ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ನಡೆದಿದ್ದರೆ, ಹೊರಗೆ ಸದ್ದಿಲ್ಲದೆ ಮೌನ ಪ್ರತಿಭಟನೆ ನಡೆದಿತ್ತು. ಜಿಲ್ಲೆಯ ರೈಲ್ವೆ ಅಭಿವೃದ್ಧಿ ಯೋಜನೆಗೆ ರೈತರಿಂದ ಯಾವುದೇ ವಿರೋಧವಿಲ್ಲ. ಆದರೆ ರೇಲ್ವೆ ಯೋಜನೆಗೆ ಸ್ವಾಧೀನ ಮಾಡಿಕೊಂಡಿರುವ ಭೂಮಿಗೆ ಐ ತೀರ್ಪಿನ ಪ್ರಕಾರ ಭೂ ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೂ ರೈತರ ಬದುಕನ್ನು ನಾಶ ಮಾಡಬಾರದೆಂದು ಹಾಗೂ ರೈತರ ಅನ್ನವನ್ನು ಕಿತ್ತುಕೊಳ್ಳಬಾರದೆಂದು ಒತ್ತಾಯಿಸಿ, ತುಮಕೂರು ರಾಯದುರ್ಗ, ದಾವಣಗೆರೆ ರೈಲ್ವೆ ಭೂ ಸ್ವಾಧೀನ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ವತಿಯಿಂದ ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಲಾಯಿತು.