ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡಿ: ರವಿಕುಮಾರ್

Rashmi Kasaragodu
Updated On : 30 Dec 2013, 2:38 am

ಚೇಳೂರು: ಮಕ್ಕಳು ಒಳ್ಳೆಯ ಬುದ್ಧಿ ಉತ್ತಮ ಶಿಕ್ಷಣವನ್ನು ಪಡೆಯಲು ಗುರಿಯನ್ನು ಇಟ್ಟುಕೊಂಡು ಸಾಧನೆ  ಮಾಡಬೇಕು ಎಂದು ಚೇಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ರವಿಕುಮಾರ್ ತಿಳಿಸಿದರು.
ಚೇಳೂರು ಹೋಬಳಿಯ ಕೊಡಿಯಾಲದ ಸರ್ಕಾರಿ ಪ್ರೌಢಶಾಲೆಯಲ್ಲಿ ಬೈಸಿಕಲ್ ವಿತರಿಸಿ ಮಾತನಾಡುತ್ತ್ಮೊದಲು ಶಾಲೆಗೆ ಹೋಗಬೇಕಾದರೆ ಒಂದೆರೆಡು ಕಿ.ಮೀ ದೂರ ನಡೆದುಕೊಂಡು ಹೋಗಬೇಕಾಗಿತ್ತು. ಆದರೆ ಸರ್ಕಾರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುತ್ತಿರುವುದರಿಂದ ಆ ಮಕ್ಕಳಿಗೆ ಅಭ್ಯಾಸ ಮಾಡಲು ಸಮಯ ಉಳಿತಾಯವಾಗುತ್ತದೆ ಎಂದರು.
ಎಲ್ಲಾ ಮಕ್ಕಳು ಸಂತೋಷದಿಂದ ಜಾತಿ ಭೇದವಿಲ್ಲದೆ ನಾವೆಲ್ಲರೂ ಒಂದೇ ಎಂದು ತಿಳಿದುಕೊಂಡು ಅಭ್ಯಾಸದಲ್ಲಿ ನಿರತರಾಗಬೇಕು ಎಂದರು.
ಮಕ್ಕಳು ಶಿಕ್ಷಣದ ಜೊತೆಗೆ ಕಾನೂನನ್ನು ಸಹ ಪಾಲನೆ ಮಾಡಬೇಕು. ದಾರಿಯಲ್ಲಿ ಹೋಗಬೇಕಾದರೆ ಬರಬೇಕಾದರೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಒಬ್ಬರು ಸೇರಿಕೊಮಡು ಜಗಳವಾಡುವುದು ಕಲ್ಲು ಎಸೆಯುವುದು ಇಂಹತ ಕೆಲಸಗಳಿಗೆ ಕೈಹಾಕದೆ ಶಿಸ್ತಿನಿಂದ ಅಭ್ಯಾಸವನ್ನು ಮಾಡಿ ಶಿಸ್ತಿನ ಸಿಪಾಯಿಗಳಾಗಬೇಕು ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತರಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement